ರಜೆ ಇದ್ದರೂ ಮನೆಗೆ ಹೋಗದೆ ಶ್ರೀನಗರಕ್ಕೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್

ನಾಲ್ಕು ವಾರಗಳ ಕಾಲದ ಅನಾರೋಗ್ಯದ ರಜೆಯಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಜೆ ಸಮಯದಲ್ಲಿ ಕುಟುಂಬದವರೊಡನೆ ಕಾಲ ಕಳೆಯದೆ ಶ್ರೀನಗರದ ವಾಯುನೆಲೆಗೆ ತೆರಳಿದ್ದಾರೆ
ಅಭಿನಂದನ್ ವರ್ತಮಾನ್
ಅಭಿನಂದನ್ ವರ್ತಮಾನ್
ಶ್ರೀನಗರ: ನಾಲ್ಕು ವಾರಗಳ ಕಾಲದ ಅನಾರೋಗ್ಯದ ರಜೆಯಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಜೆ ಸಮಯದಲ್ಲಿ ಕುಟುಂಬದವರೊಡನೆ ಕಾಲ ಕಳೆಯದೆ ಶ್ರೀನಗರದ ವಾಯುನೆಲೆಗೆ ತೆರಳಿದ್ದಾರೆ.
ಭಾರತಕ್ಕೆ ನುಗ್ಗಿದ್ದ ಪಾಕಿಸ್ತಾನ ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದಿದ್ದ ಅಭಿನಂದನ್ ಪಾಕ್ ಸೇನೆಗೆ ಸಿಕ್ಕು ಎರಡೂವರೆ ದಿನಗಳ ನಂತರ ಭಾರತಕ್ಕೆ ಸುರಕ್ಷಿತವಾಗಿ ಹಿಂತಿರುಗಿದ್ದರು. ಭಾರತಕ್ಕೆ ಮರಳಿದ್ದ ಅಭಿನಂದನ್ ವಾಯುಪಡೆಯಿಂದ ವಿಚಾರಣೆಗೆ ಒಳಗಾಗಿದ್ದು ಅವರ ವಿಚಾರಣೆ ನಂತರ ನಾಲ್ಕು ವಾರಗಳ ಕಾಲ ಅನಾರೋಗ್ಯದ ರಜೆ ಮೇಲೆ ತೆರಳುವಂತೆ ಹೇಳಲಾಗಿತ್ತು.
ಈ ರಜೆಯಲ್ಲಿ ಚೆನ್ನೈನಲ್ಲಿರುವ ತನ್ನ ಕುಟುಂಬಸ್ಥರೊಡನೆ ಇರಬಹುದಾದ ಆಯ್ಕೆಯನ್ನು ಬಳಸಿಕೊಳ್ಳದ ಅಭಿನಂದನ್ ಶ್ರೀನಗರದಲ್ಲಿನ ಸಹೋದ್ಯೋಗಿಗಳ ಜತೆಗೆ ಇರಲಿದ್ದಾರೆ. ಪ್ರಸ್ತುತ ತಮ್ಮ ನೆಚ್ಚಿನ ಸಹೋದ್ಯೋಗ್ಗಿಗಳ ಜತೆಗಿರುವ ಅಭಿನಂದನ್ ರಜೆ ಬಳಿಕ ದೆಹಲಿಗೆ ಮರಳಲಿದ್ದಾರೆ.
ದೆಹಲಿಯಲ್ಲಿ ವೈದ್ಯರು ಅಭಿನಂದನ್ ಆರೋಗ್ಯ ಪರೀಕ್ಷೆ ನಡೆಸಲಿದ್ದು ಅವರ ದೈಹಿಕ ಸಾಮರ್ಥ್ಯವನ್ನು ಪರೀಕ್ಷ್ಸಿಸಿ ಕರ್ತವ್ಯಕ್ಕೆ ಮರಳಬಹುದೆ, ಇಲ್ಲವೆ ಎನ್ನುವುದನ್ನು ನಿರ್ಧರಿಸುತ್ತಾರೆ.
ವಾಯುಸೇನೆಯ ವಿಂಗ್​ ಕಮಾಂಡರ್​ ಪಾಕಿಸ್ತಾನದ F16 ಅನ್ನು ಭಾರತ ವಾಯುದಾಳಿಯ ಬೆನ್ನಲ್ಲೇ ಹೊಡೆದುರುಳಿಸಿದರೂ ಅವರಿದ್ದ ವಿಮಾನ ಪಾಕಿಸ್ತಾನದಲ್ಲಿ ಪತನವಾಗಿದ್ದು ಅವರು ಪಾಕ್ ಸೇನೆಗೆ ಸೆರೆಸಿಕ್ಕಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com