ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ; ಚುನಾವಣಾ ಆಯೋಗದಿಂದ ನೊಟೀಸ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ...
ನರೇಂದ್ರ ಮೋದಿ ಸಿನಿಮಾದಲ್ಲಿ ವಿವೇಕ್ ಒಬೆರಾಯ್
ನರೇಂದ್ರ ಮೋದಿ ಸಿನಿಮಾದಲ್ಲಿ ವಿವೇಕ್ ಒಬೆರಾಯ್
ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ನಿರ್ಮಿಸಿರುವ ಚಿತ್ರತಂಡಕ್ಕೆ ದೆಹಲಿ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದ್ದು ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಚಿತ್ರ ಏಪ್ರಿಲ್ 5ರಂದು ತೆರೆಗೆ ಬರುವ ನಿರೀಕ್ಷೆಯಿದೆ.
ದೆಹಲಿ ಚುನಾವಣಾ ಆಯೋಗದ ಪೂರ್ವ ದೆಹಲಿ ಅಧಿಕಾರಿ ಕೆ ಮಹೇಶ್ ಕಳೆದ ಮಾರ್ಚ್ 20ರಂದು ಚಿತ್ರ ನಿರ್ಮಾಣ ಸಂಸ್ಥೆಗೆ, ಸಂಗೀತ ಸಂಯೋಜನೆ ಕಂಪೆನಿಗೆ ಮತ್ತು ಜಾಹಿರಾತು ಪ್ರಕಟಿಸಿದ ಎರಡು ಪತ್ರಿಕೆಗಳಿಗೆ ಸ್ವಯಂ ಪ್ರೇರಿತ ನೊಟೀಸ್ ಜಾರಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com