ಆರ್ ಬಿ ಐ ಗೌರ್ನರ್ ಶಕ್ತಿಕಾಂತ್ ದಾಸ್ ನೇಮಕದ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಕಾರ

ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ನೇಮಕಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರವು ನಿರಾಕರಿಸಿದೆ.

Published: 26th March 2019 12:00 PM  |   Last Updated: 28th March 2019 01:30 AM   |  A+A-


Shaktikanta Das

ಶಕ್ತಿಕಾಂತ್ ದಾಸ್

Posted By : ABN ABN
Source : The New Indian Express
ನವದೆಹಲಿ: ಆರ್ ಬಿಐ  ಗೌರ್ನರ್ ಶಕ್ತಿಕಾಂತ್ ದಾಸ್ ನೇಮಕಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರವು ನಿರಾಕರಿಸಿದೆ.

ಮಂತ್ರಿಗಳು, ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳನ್ನೊಳಗೊಂಡ ದಾಖಲೆಗಳನ್ನು ಹಂಚಿಕೊಳ್ಳುವುದು ಪಾರದರ್ಶಕ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗಿದೆ

ಕಿರುಪಟ್ಟಿಯಲ್ಲಿನ ಅಭ್ಯರ್ಥಿಗಳ ಹೆಸರುಗಳು ಮತ್ತು ನೇಮಕಾತಿಗೆ ಸಂಬಂಧಿಸಿದ ಕಡತಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತಿಲ್ಲ ಎಂದು ಆರ್ ಟಿಐ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಡಿಸೆಂಬರ್ 11, 2018 ರಲ್ಲಿ ಆರ್ ಬಿಐ ಗೌರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು  ಮೂರು ವರ್ಷಗಳ ಅವಧಿಗೆ ನೇಮಕಗೊಳಿಸಿತ್ತು.  ಉರ್ಜಿತ್ ಪಟೇಲ್ ದಿಢೀರನೇ ರಾಜೀನಾಮೆ ನೀಡಿದ ನಂತರ ಶಶಿಕಾಂತ್ ದಾಸ್ ಅವರನ್ನು ನೇಮಕ ಮಾಡಲಾಗಿತ್ತು.

ಆರ್ ಬಿಐ ಗೌರ್ನರ್ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಜಾಹಿರಾತು , ಸುತ್ತೋಲೆ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಯ ಪ್ರತಿನಿಧಿಯೊಬ್ಬರು ಆರ್ ಟಿಐ ಅರ್ಜಿ ಸಲ್ಲಿಸಿದ್ದರು.

ಹಣಕಾಸು ಸೇವಾ ನಿಯಂತ್ರಣ ನೇಮಕ ಶೋಧನಾ ಸಮಿತಿ- ಎಫ್ ಎಸ್ ಆರ್ ಎಎಸ್ ಸಿ ಶಿಫಾರಸ್ಸಿನ ಆಧಾರದ ಮೇಲೆ  ಕೇಂದ್ರ ಸಂಪುಟ  ಆರ್ ಬಿಐ ಗೌರ್ನರ್ ಆಯ್ಕೆ ಮಾಡುತ್ತದೆ ಎಂದು  ಹಣಕಾಸು ಸೇವಾ ಇಲಾಖೆ ತಿಳಿಸಿದೆ.

ಸಂಪುಟ ಕಾರ್ಯದರ್ಶಿ ಈ ಸಮಿತಿ ಅಧ್ಯಕ್ಷರಾಗಿದ್ದು, ಪ್ರಧಾನ ಮಂತ್ರಿಗಳ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆಯ ಕಾರ್ಯದರ್ಶಿ ಹಾಗೂ ಹೊರಗಿನ ಮೂವರು ತಜ್ಞರು ಇದರ ಸದಸ್ಯರಾಗಿರುತ್ತಾರೆ.

ಶಕ್ತಿಕಾಂತ್ ದಾಸ್  1980 ರ ಬ್ಯಾಚಿನ ತಮಿಳುನಾಡು ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಮೇ 2017ರಂದು ನಿವೃತ್ತಿಯಾಗಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp