ನನ್ನ ಮನೆಗೆ ನುಗ್ಗಿದ ವಿದ್ಯಾರ್ಥಿಗಳು ನನ್ನ ಪತ್ನಿಯನ್ನು ಕೂಡಿ ಹಾಕಿದ್ದರು: ಜೆಎನ್ ಯು ಉಪಕುಲಪತಿ

: ಅಡ್ಮಿಶನ್ ಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಗುಂಪೊಂದು ನನ್ನ ಮನೆಯೊಳಗೆ ಬಲವಂತವಾಗಿ ನುಗ್ಗಿ ನನ್ನ ..
pಜಗದಸೇ ಕುರ್
pಜಗದಸೇ ಕುರ್
ನವದೆಹಲಿ: ಅಡ್ಮಿಶನ್ ಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಗುಂಪೊಂದು ನನ್ನ ಮನೆಯೊಳಗೆ ಬಲವಂತವಾಗಿ ನುಗ್ಗಿ ನನ್ನ ಹೆಂತಿಯನ್ನು ಕೂಡಿ ಹಾಕಿದ್ದಾರೆ ಎಂದು ಜಎನ್ ಯು ವಿವಿ ಉಪಕುಲಪತಿ ಮಮಿದಾಳ ಜಗದೇಶ್ ಕುಮಾರ್ ಆರೋಪಿಸಿದ್ದಾರೆ. 
ಆದರೆ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ ಸಂಘ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು, ಉಪ ಕುಲಪತಿಗಳ ಮನೆ ಮುಂದಿನ ಸೆಕ್ಯೂರಿಟಿ ನಮ್ಮ ಮೇಲೆ ಹಲ್ಲೆ ನಡೆಸಿದ ಪರಿಣಾಮ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ,
ಕೆಲವು ವಿದ್ಯಾರ್ಥಿಗಳು ನನ್ನ ಮನೆ ಬಾಗಿಲು ಮುರಿದು,ಒಳನುಗ್ಗಿ ನನ್ನ ಹೆಂಡತಿಯನ್ನು ಕೂಡಿ ಹಾಕಿದ್ದಾರೆ. ನನ್ನ ಮನೆಯಲ್ಲಿ ಪತ್ನಿ ಒಂಟಿಯಾಗಿದ್ದರು. ಈ ವೇಳೆ ಆಕೆಯನ್ನು ಕೂಡಿ ಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ನಾನು ಮನೆಯಿಂದ ಹೊರಗೆ ಯಾವುದೋ ಮೀಟಿಂಗ್ ನಲ್ಲಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. ಮಹಿಳಾ ಗಾರ್ಡ್ ಗಳು ನನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com