'ಕುಕ್ಕರ್' ಗುರುತಿಗೆ ದಿನಕರನ್ ಪ್ರತಿಪಾದನೆ: ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಣೆ

ಸಾಮಾನ್ಯ ಚುನಾವಣೆಯ ಗುರುತಾಗಿ ಕುಕ್ಕರ್ ಚಿಹ್ನೆಗೆ ಟಿಟಿವಿ ದಿನಕರನ್ ಪ್ರತಿಪಾದಿಸುತ್ತಿದ್ದು, ಅದನ್ನು ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಟಿಟಿವಿ ದಿನಕರ್
ಟಿಟಿವಿ ದಿನಕರ್

ನವದೆಹಲಿ: ಸಾಮಾನ್ಯ ಚುನಾವಣೆಯ ಗುರುತಾಗಿ ಕುಕ್ಕರ್ ಚಿಹ್ನೆಗೆ  ಟಿಟಿವಿ ದಿನಕರನ್ ಪ್ರತಿಪಾದಿಸುತ್ತಿದ್ದು, ಅದನ್ನು  ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಆದಾಗ್ಯೂ, ಮುಂಬರುವ  ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಲೋಕಸಭಾ ಹಾಗೂ ಆಸೆಂಬ್ಲಿ ಉಪ ಚುನಾವಣೆಯಲ್ಲಿ ದಿನಕರನ್ ನೇತೃತ್ವದ  ಪಕ್ಷದ ಅಭ್ಯರ್ಥಿಗಳಿಗೆ  ಯಾವುದಾದರೊಂದು ಗುರುತನ್ನು ನೀಡುವಂತೆ  ಚುನಾವಣಾ ಆಯೋಗಕ್ಕೆ ವಿಭಾಗೀಯ ಪೀಠ ಆದೇಶಿಸಿದೆ.

ಸಾಮಾನ್ಯ ಚುನಾವಣಾ ಗುರುತನ್ನು ಪರಿಗಣಿಸುವಂತೆ  ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ನೇತೃತ್ವದ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ತಿಳಿಸಿದ್ದು, ದಿನಕರ್  ಗುಂಪಿನ ಅಭ್ಯರ್ಥಿಗಳನ್ನು ರಾಜಕೀಯ ಪಕ್ಷ ಎಂದು ಪರಿಗಣಿಸುವಂತಿಲ್ಲ, ರಾಜಕೀಯ ಉದ್ದೇಶಗಳಿಗಾಗಿ ಸ್ವತಂತ್ರ ಅಭ್ಯರ್ಥಿಗಳೆಂದು ಪರಿಗಣಿಸಬಹುದು ಎಂದು ಹೇಳಿದೆ.

ದಿನಕರನ್ ಗುಂಪು ನೋಂದಣಿಯ ನಂತರವಷ್ಟೇ ರಾಜಕೀಯ ಪಕ್ಷವಾಗಿ  ಪರಿಗಣಿಸಬೇಕಾದದ್ದು, ಚುನಾವಣಾ ಆಯೋಗದ ಕರ್ತವ್ಯ ಮತ್ತು ಹಕ್ಕಾಗಿದೆ ಎಂದು ನ್ಯಾಯಾಧೀಶರಾದ ದೀಪಕ್ ಗುಪ್ತಾ ಹಾಗೂ ಸಂಜಿವ್ ಖಾನ್ಹಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com