ಎ-ಸ್ಯಾಟ್​ ಮಿಸೈಲ್: ಯಾವುದೇ ದೇಶದ ವಿರುದ್ಧವಲ್ಲ, ನಮ್ಮ ದೇಶದ ರಕ್ಷಣೆಗಾಗಿ ಮಾತ್ರ!

ಇದು ನಮ್ಮ ಹೊಸ ಶಕ್ತಿಯಷ್ಟೇ.. ನಮ್ಮ ಈ ಸಾರ್ಥ್ಯವನ್ನು ಯಾವುದೇ ದೇಶದ ವಿರುದ್ಧವೂ ಪ್ರಯೋಗಿಸುವುದಿಲ್ಲ. ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮಗಳಿಗೆ ಮತ್ತು ಭದ್ರತೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Published: 27th March 2019 12:00 PM  |   Last Updated: 27th March 2019 01:52 AM   |  A+A-


our capability won't be used against anyone but is purely India's defence initiative for its security: PM Modi

ಸಂಗ್ರಹ ಚಿತ್ರ

Posted By : SVN
Source : ANI
ನವದೆಹಲಿ: ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹವೊಂದನ್ನು ಎ-ಸ್ಯಾಟ್ ಕ್ಷಿಪಣಿ ಬಳಕೆ ಮಾಡಿ ಹೊಡೆದುರುಳಿಸಲಾಗಿದ್ದು, ಇದು ನಮ್ಮ ಹೊಸ ಶಕ್ತಿಯಷ್ಟೇ.. ನಮ್ಮ ಈ ಸಾರ್ಥ್ಯವನ್ನು ಯಾವುದೇ ದೇಶದ ವಿರುದ್ಧವೂ ಪ್ರಯೋಗಿಸುವುದಿಲ್ಲ. ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮಗಳಿಗೆ ಮತ್ತು ಭದ್ರತೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಎ-ಸ್ಯಾಟ್​ ಮಿಸೈಲ್​ ನಮ್ಮ ಬಾಹಾಕ್ಯಾಶ ಕಾರ್ಯಕ್ರಮಗಳಿಗೆ ಹೊಸ ಬಲವನ್ನು ತುಂಬಲಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನಾನೊಂದನ್ನು ಖಚಿತಪಡಿಸುತ್ತೇನೆ. ನಮ್ಮ ಸಾಮರ್ಥ್ಯವನ್ನು ಯಾರ ವಿರುದ್ಧವೂ ಪ್ರಯೋಗಿಸುವುದಿಲ್ಲ. ಆದರೆ, ಇದು ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮಗಳಿಗೆ ಮತ್ತು ಭದ್ರತೆಗೆ ಬಳಸಲಾಗುತ್ತದೆ. ಬಾಹ್ಯಾಕಾಶದಲ್ಲಿನ ಶಸ್ತ್ರಗಳನ್ನು ನಾವು ವಿರೋಧಿಸುತ್ತೇವೆ. ಈ ಪರೀಕ್ಷೆಯಿಂದ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳನ್ನಾಗಲಿ ಅಥವಾ ಕಾನೂನಾಗಲಿ ನಾವು ಉಲ್ಲಂಘಿಸುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ.

'ಆ್ಯಂಟಿ ಸೆಟಲೈಟ್‌- (ಎ ಸ್ಯಾಟ್‌) ಕ್ಷಿಪಣಿಯ ಯಶಸ್ದೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ. ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. 

ಅಂತೆಯೇ 'ಈ ಸಾಧನ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣದ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ ಎಂದೂ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp