ಫೇಸ್ ಬುಕ್ ಮೂಲಕ ವಂಚನೆ; ನೈಜೀರಿಯಾ ಪ್ರಜೆಯಿಂದ ದೆಹಲಿ ಉದ್ಯಮಿಗೆ ಲಕ್ಷಾಂತರ ರೂ. ಪಂಗನಾಮ!

ಲಂಡನ್ ಮೂಲದ ಉದ್ಯಮಿ ಮಹಿಳೆ ಎಂದು ಫೇಸ್ ಬುಕ್ ನಲ್ಲಿ ಸ್ನೇಹಿತನಾಗಿ ನೈಜೀರಿಯಾ ಪ್ರಜೆಯಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಲಂಡನ್ ಮೂಲದ ಉದ್ಯಮಿ ಮಹಿಳೆ ಎಂದು ಫೇಸ್ ಬುಕ್ ನಲ್ಲಿ ಸ್ನೇಹಿತನಾಗಿ ನೈಜೀರಿಯಾ ಪ್ರಜೆಯಿಂದ ಮೋಸ ಹೋಗಿ ದೆಹಲಿ ಮೂಲದ ಸಂಜಯ್ ಬ್ಯಾನರ್ಜಿ ಎಂಬ ಉದ್ಯಮಿಯೊಬ್ಬರು 5 ಲಕ್ಷದ 90 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ನೈಜೀರಿಯಾ ಪ್ರಜೆ 35 ವರ್ಷದ ಓಗ್ಬೊಂಡೋ ಇಫೆನೈ ಹೆನ್ರಿ ಎಂದು ಗುರುತಿಸಲಾಗಿದೆ. ದೆಹಲಿಯ ಡೆವ್ಲಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಓಗ್ಬೊಂಡೋನನ್ನು ಅಪರಾಧ ವಿಭಾಗ ಪೊಲೀಸರ ತಂಡ ದಾಳಿ ನಡೆಸಿ ಬಂಧಿಸಿದೆ.
ಆರೋಪಿ ದೆಹಲಿ ಮೂಲದ ಉದ್ಯಮಿಯಿಂದ 5.90 ಲಕ್ಷ ರೂಪಾಯಿಗಳನ್ನು ಮೋಸದಿಂದ ಕಿತ್ತುಕೊಂಡಿದ್ದನು. ಫೇಸ್ ಬುಕ್ ನಲ್ಲಿ ಲಂಡನ್ ಮೂಲದ ಮಹಿಳಾ ಉದ್ಯಮಿ ಹೊಲ್ಲಿ ಡೇವಿಡ್ ಎಂದು ಹೆಸರು ಹೇಳಿಕೊಂಡು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದನು. ಈ ಹಿಂದೆ ಕೂಡ ಅದೇ ರೀತಿಯಲ್ಲಿ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದನು ಎನ್ನುತ್ತಾರೆ ದೆಹಲಿಯ ಹೆಚ್ಚುವರಿ ಆಯುಕ್ತ ಎಕೆ ಸಿಂಗ್ಲಾ.
2017ರ ಜನವರಿಯಲ್ಲಿ ಸಂಜಯ್ ಬ್ಯಾನರ್ಜಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಫ್ರೆಂಡ್ಸ್ ಆಗಿ ನಂತರ ಇಬ್ಬರ ಮಧ್ಯೆ ಫೇಸ್ ಬುಕ್ ಮೆಸೆಂಜರ್ ಮತ್ತು ವಾಟ್ಸಾಪ್ ಗಳಲ್ಲಿ ನಿತ್ಯ ಸಂಭಾಷಣೆ ನಡೆಯುತ್ತಿತ್ತು. ಆತ ಫೋಟೋ ಕೂಡ ಕಳುಹಿಸಿದ್ದು ಅದು ಲಂಡನ್ ನ ಒಬ್ಬ ರೂಪದರ್ಶಿಯ ಫೋಟೋ ಎಂದು ತಿಳಿದುಬಂದಿದೆ. ಹೊಲ್ಲಿ ಡೇವಿಡ್ ತನಗೆ ನಿನ್ನ ಮೇಲೆ ಪ್ರೀತಿ ಹುಟ್ಟಿದ್ದು ಮದುವೆಯಾಗಲು ಬಯಸುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದನು.
ನಂತರ ಅದೇ ವರ್ಷ ಫೆಬ್ರವರಿಯಲ್ಲಿ ತಾನು ಭಾರತಕ್ಕೆ ಬರುವುದಾಗಿ ಕೂಡ ಹೇಳಿದ್ದನು. ಫೆಬ್ರವರಿ 6ರಂದು ಸಂಜಯ್ ಬ್ಯಾನರ್ಜಿಗೆ ಒಂದು ಕರೆ ಬರುತ್ತದೆ. ಮುಂಬೈ ಕಸ್ಟಮರ್ ಆಫೀಸ್ ನಿಂದ ಕರೆ ಮಾಡುವುದು ಎಂದು ಹೇಳಿ ಹೊಲ್ಲಿ ಡೇವಿಡ್ ನನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದು 55 ಸಾವಿರ ರೂಪಾಯಿ ದಂಡ ಪಾವತಿಸಲು ಹೇಳುತ್ತಿದ್ದಾರೆ ಎಂದು.
ಆತನ ಮಾತನ್ನು ನಂಬಿ ಸಂಜಯ್ ಬ್ಯಾನರ್ಜಿ ಮೂರು ಇನ್ಸ್ಟಾಲ್ ಮೆಂಟ್ ನಲ್ಲಿ ಒಟ್ಟು 5 ಲಕ್ಷದ 90 ಸಾವಿರ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಾರೆ. ಆಕೆ ಮತ್ತೆ ಹಣ ಕೇಳುತ್ತಾಳೆ, ಆಗ ಬ್ಯಾನರ್ಜಿಗೆ ಸಂಶಯ ಬಂದು ತಾನು ಯಾವುದೋ ವ್ಯವಸ್ಥಿತ ಸಂಚಿಗೆ ಸಿಕ್ಕಿಹಾಕಿಕೊಂಡಿರುವುದಾಗಿ ಸಂಶಯ ಬಂದು ಪೊಲೀಸರಿಗೆ ದೂರು ನೀಡಿದರು ಎಂದು ಸಿಂಗ್ಲಾ ಮಾಧ್ಯಮಗಳಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com