ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್ ಮೇಲ್: ಮಾಡೆಲ್ ಶವ ಕೆರೆಯಲ್ಲಿ ಪತ್ತೆ!

ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮಾಡೆಲ್ ಒಬ್ಬಳ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ದಂಥಾರಿ ಜಿಲ್ಲೆಯಲ್ಲಿ ನಡೆದಿದೆ.
ಅಂಚಲ್ ಯಾದವ್
ಅಂಚಲ್ ಯಾದವ್
ರಾಂಚಿ: ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮಾಡೆಲ್ ಒಬ್ಬಳ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ದಂಥಾರಿ ಜಿಲ್ಲೆಯಲ್ಲಿ ನಡೆದಿದೆ.
ಜಾರ್ಖಂಡ್ ನ ದಂಥಾರಿ ನಿವಾಸಿ 32 ವರ್ಷದ ಅಂಚಲ್ ಯಾದವ್ ಅವರು ಮಾಡೆಲಿಂಗ್ ಜೊತೆ ವಿಮಾ ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ನಗರದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪಾರ್ಟಿ ನಡೆದರೂ ಅಲ್ಲಿಗೆ ಅಂಚಲ್ ಕೂಡ ಆಗಮಿಸುತ್ತಿದ್ದಳು.
ರಾಯ್ ಪುರದಿಂದ ದಾಂಥರಿ ನಿವಾಸಕ್ಕೆ ಅಂಚಲ್ ಸೋಮವಾರ ರಾತ್ರಿ ಬಂದಿದ್ದರು. ಇದೇ ವೇಳೆ ಆಕೆಗೆ ಒಂದು ಫೋನ್ ಕರೆ ಬಂದಿದ್ದು ಮನೆಯಿಂದ ಹೊರ ಅಂಚಲ್ ಶವ ಮಂಗಳವಾರ ಸಂಜೆ ಪತ್ತೆಯಾಗಿದೆ.
ಅರ್ಧ ಗಂಟೆಯಲ್ಲಿ ಮನೆಗೆ ಬರುವುದಾಗಿ ತಾಯಿ ಬಳಿ ಅಂಚಲ್ ಹೇಳಿ ಹೋಗಿದ್ದರು. ಆದರೆ ಆಕೆಯ ಕೈಕಾಲು ಹಾಗೂ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿದ್ದ ಸ್ಥಿತಿಯಲ್ಲಿ ಅವಳ ಶವ ಪತ್ತೆಯಾಗಿದೆ. 
ಪರಿಚಯಸ್ಥನಿಂದಲೇ ಆಕೆಯ ಕೊಲೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಇನ್ನು 2014ರಲ್ಲಿ ಬರನಾವಾಪಾರಾದಲ್ಲಿ ಅರಣ್ಯ ಅಧಿಕಾರಿಗೆ ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದ ಆರೋಪದ ಅಡಿಯಲ್ಲಿ ಅಂಚಲ್ ಳನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com