ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟಕ್ಕೆ 16 ಪೊಲೀಸರು ಹುತಾತ್ಮ

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಬುಧವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಬಾಂಬ್ ಸ್ಫೋಟಿಸಿದ ಪರಿಣಾಮ 16 ಪೊಲಸರು ಹುತಾತ್ಮರಾಗಿದ್ದಾರೆ...
ಐಇಡಿ ಸ್ಫೋಟ ನಡೆದ ಸ್ಥಳ
ಐಇಡಿ ಸ್ಫೋಟ ನಡೆದ ಸ್ಥಳ
ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಬುಧವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಬಾಂಬ್ ಸ್ಫೋಟಿಸಿದ ಪರಿಣಾಮ 16 ಪೊಲಸರು ಹುತಾತ್ಮರಾಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಉತ್ತರ ಗಡ್ಚಿರೋಲಿಯ ಕುರ್ಖೇಡಾದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಲೆಂಧ್ರಿ ಪೂಲ್‌ ಬಳಿ 16 ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ನಕ್ಸಲರ ಎರಡನೇ ಕೃತ್ಯ ಇದಾಗಿದ್ದು, ಇಂದು ಬೆಳಗಿನ ಜಾವ ಗಡ್ಚಿರೋಲಿ ಜಿಲ್ಲೆಯ ಕುರ್ಖೇಡಾದಲ್ಲಿ ಗುತ್ತಿಗೆದಾರರೊಬ್ಬರಿಗೆ ಸೇರಿದ ಕನಿಷ್ಠ 36 ವಾಹನಗಳಿಗೆ ಬೆಂಕಿ ಹಚ್ಚಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com