ಕಾಂಗ್ರೆಸ್ ಗೆ ನನ್ನನ್ನು ಹತ್ಯೆ ಮಾಡುವಷ್ಟು ದ್ವೇಷ : ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತದೆ ಎಂದರೆ ನನ್ನನ್ನು ಹತ್ಯೆ ಮಾಡುವಷ್ಟು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನನ್ನನ್ನು ಹತ್ಯೆ ಮಾಡುವಷ್ಟು ದ್ವೇಷ ಮಾಡುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ಕಾಂಗ್ರೆಸ್ ನನ್ನನ್ನು ಹತ್ಯೆ ಮಾಡುವಷ್ಟು ದ್ವೇಷ ಮಾಡುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ಇಟಾರ್ಸಿ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತದೆ ಎಂದರೆ ನನ್ನನ್ನು ಹತ್ಯೆ ಮಾಡುವಷ್ಟು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಧ್ಯಪ್ರದೇಶದ ಇಟಾರ್ಸಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಮೋದಿಯನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತದೆ ಎಂದರೆ ನನ್ನನ್ನು ಹತ್ಯೆ ಮಾಡಲು ಕನಸು ಕಾಣುತ್ತಿದ್ದಾರೆ ಎಂದು ಜನತೆಗೆ ತಿಳಿಸಿದ್ದಾರೆ. 
ಕಾಂಗ್ರೆಸ್ ನಾಯಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿ ಮತ ಯಾಚಿಸುವ ಭರದಲ್ಲಿ "ಮತದಾರರೇ ನೀವು ಹೊಡೆಯುವ ಸಿಕ್ಸರ್ ಗೆ ಮೋದಿ ಗಡಿಯಾಚೆ ಹೋಗಿ ಸಾಯಬೇಕು" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಬಳಸಿಕೊಂಡಿರುವ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ವಿವಾದಿತ ಇಸ್ಲಾಮಿಕ್ ಪ್ರಚಾರಕ ಝಾಕಿರ್ ನಾಯ್ಕ್ ಗೆ ಬೆಂಬಲ ನೀಡುವ ದಿಗ್ವಿಜಯ್ ಸಿಂಗ್ ವಿರುದ್ಧವೂ ಮೋದಿ ಕಿಡಿಕಾರಿದ್ದು, ಶ್ರೀಲಂಕಾದಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಅಲ್ಲಿನ ಸರ್ಕಾರ ಝಾಕಿರ್ ನಾಯ್ಕ್ ಟಿವಿ ಚಾನಲ್ ನ್ನು ನಿಷೇಧಿಸಿತ್ತು, ಅದೇ ಝಾಕಿರ್ ನಾಯ್ಕ್ ನ್ನು ದಿಗ್ವಿಜಯ್ ಸಿಂಗ್ ಶಾಂತಿಯ ದೂತ ಎಂದು ಬಣ್ಣಿಸಿದ್ದರು. ದಿಗ್ವಿಜಯ್ ಸಿಂಗ್ ಭೋಪಾಲ್ ನ ಕಾಂಗ್ರೆಸ್ ಅಭ್ಯರ್ಥಿ ಎಂಬುದನ್ನು ಮರೆಯಬೇಡಿ ಎಂದು ಮೋದಿ ಜನತೆಗೆ ನೆನಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com