ಲಖನೌ: ಮನೆಯಲ್ಲಿ ಅಗ್ನಿ ಅವಘಡ, 6 ತಿಂಗಳ ಮಗು ಸೇರಿ ಐವರು ಸಜೀವ ದಹನ

ಉತ್ತರ ಪ್ರದೇಶದ ಲಖನೌನ ಮಾಯಾವತಿ ಕಾಲೋನಿಯ ಮನೆಯೊಂದರಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಆರು ತಿಂಗಳ ಮಗು...

Published: 01st May 2019 12:00 PM  |   Last Updated: 01st May 2019 03:55 AM   |  A+A-


Six-month-old, 4 others charred to death while sleeping as fire breaks out in Lucknow home

ಸಾಂದರ್ಭಿಕ ಚಿತ್ರ

Posted By : LSB LSB
Source : IANS
ಲಖನೌ: ಉತ್ತರ ಪ್ರದೇಶದ ಲಖನೌನ ಮಾಯಾವತಿ ಕಾಲೋನಿಯ ಮನೆಯೊಂದರಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಆರು ತಿಂಗಳ ಮಗು ಸೇರಿದಂತೆ ಐವರು ಸಜೀವ ದಹನವಾಗಿದ್ದಾರೆ.

ಪ್ರತಾಪಗಢ ನಿವಾಸಿ ಟಿಎನ್ ಸಿಂಗ್ ಅವರು ತಮ್ಮ ಮನೆಯಲ್ಲಿಯೇ ಗ್ಯಾಸ್ ಸ್ಟೌವ್ ಗೋದಾಮು ಹೊಂದಿದ್ದು, ಎಲ್ಲರೂ ಮಲಗಿದ್ದಾಗ ರಾತ್ರಿ 1.30ರ ಸುಮಾರಿಗೆ ಮನೆಯ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇಂದಿರಾ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಮರನಾಥ್ ವಿಶ್ವಕರ್ಮ ಅವರು ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಗ್ಯಾಸ್ ಸ್ಟೌವ್ ಗಳಿಗೂ ವ್ಯಾಪಿಸಿದೆ. ಪರಿಣಾಮ ಐವರು ಸಜೀವ ದಹನಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೃತರನ್ನು ಸುಮಿತ್ ಸಿಂಗ್, ಆತನ ಪತ್ನಿ ಜ್ಯೂಲಿ, ಅವರ ಆರು ತಿಂಗಳ ಮಗಳು, ದಬ್ಲು ಸಿಂಗ್ ಹಾಗೂ ವಂದನಾ ಸಿಂಗ್ ಎಂದು ಗುರುತಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp