ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಮಿಳುನಾಡು: ಪಿಎಫ್‌ಐ, ಎಸ್‌ಡಿಪಿಐ ಕಚೇರಿ ಮೇಲೆ ಎನ್ಐಎ ದಾಳಿ

ಮತಾಂತರ ವಿರೋಧಿಸಿದ್ದ ಪಿಎಂಕೆ ಪಕ್ಷದ ಕಾರ್ಯಕರ್ತರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು....
ತಿರುಚನಾಪಳ್ಳಿ: ಮತಾಂತರ ವಿರೋಧಿಸಿದ್ದ ಪಿಎಂಕೆ ಪಕ್ಷದ ಕಾರ್ಯಕರ್ತರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಗುರುವಾರ, ತಿರುಚನಾಪಳ್ಳಿ ಮತ್ತು ಕುಂಭಕೋಣಂನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಚೇರಿಯಗಳ ಮೇಲೆ ದಾಳಿ ನಡೆಸಿದ್ದಾರೆ.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಎ.ಪಿ.ಶೌಕತ್ ಅವರ ನೇತೃತ್ವದ ಎನ್‌ಐಎ ತಂಡ, ತಂಜಾವೂರ್‌ ಜಿಲ್ಲೆಯ ಕುಂಬಕೋಣಂನ ಎಸ್‌ಡಿಪಿಐ ಕಚೇರಿ, ತಿರುಚನಾಪಳ್ಳಿಯ ಪಾಲಕ್ಕರೈಯ ಪಿಎಫ್ಐ ಕಚೇರಿಯ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ.
ಶೋಧ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಚೇರಿಯಲ್ಲಿದ್ದ ಇಬ್ಬರು ಪದಾಧಿಕಾರಿಗಳನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಎನ್ಐಎ ಅಧಿಕಾರಿಗಳು ದೂರುದಾರರೊಂದಿಗೆ ಎಲ್ಲಾ ಆರೋಪಿಗಳ ವಿಚಾರಣೆಯನ್ನು ಥಿರುವಿರೈಮರ್ಥೂರ್ ಡಿಎಸ್‌ಪಿ ಎ.ಟಿ.ರಾಮಚಂದ್ರನ್‌ ನಡೆಸಿದರು.
ದಲಿತರನ್ನು ಇಸ್ಲಾಮ್‌ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದನ್ನು ಪಿಎಂಕೆ ಕಾರ್ಯಕರ್ತ ತಂಜಾವೂರು ಜಿಲ್ಲೆಯ ತಿರುಭುವನಮ್‌ನ ಕೀಜ ತೂಂದಿಲ್ ವಿನಾಯಕಮ್ ಪೆಟ್ಟಯಿ ನಿವಾಸಿ ವಿ.ರಾಮಲಿಂಗಮ್ (45) ಅವರು ಪ್ರಶ್ನಿಸಿದ್ದರು. ಅವರನ್ನು ಫೆಬ್ರವರಿ 5ರಂದು ತಂಡವೊಂದು ತಂಜಾವೂರು ಜಿಲ್ಲೆಯ ಮುಸ್ಲಿಮ್‌ ಸ್ಟ್ರೀಟ್‌ನಲ್ಲಿ ಹತ್ಯೆಮಾಡಿತ್ತು.
ಸಂತ್ರಸ್ತರ ಪುತ್ರ ಆರ್.ಶ್ಯಾಮ್‌ ಸುಂದರ್  ಅವರು ಈ ಬಗ್ಗೆ ದೂರು ನೀಡಿದ್ದರು. ಥಿರುವಿದೈಮರ್ಥೂರ್ ಪೊಲೀಸ್ ಠಾಣೆಯಲ್ಲಿ 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಆದಾಗ್ಯೂ, ವಿವಿಧ ವಲಯಗಳಲ್ಲಿ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಮಾರ್ಚ್‌ 4ರಂದು ಈ ಪ್ರಕರಣವನ್ನು ಎನ್ಐಎಎಗೆ ವರ್ಗಾಯಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com