ಆಕ್ರೋಶಿತ ಆನೆ ದಾಳಿಗೆ ಹೆದರಿ ಬೆಂಡಾದ ಪ್ರವಾಸಿಗರು; ಬೈಕ್ ಪುಡಿ ಪುಡಿ, ವಿಡಿಯೋ ನೋಡಿದ್ರೆ ಎದೆ ನಡುಗುತ್ತೆ!

ಕೊರ್ಬೆಟ್ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಆನೆಯ ಆರ್ಭಟಕ್ಕೆ ಪ್ರವಾಸಿಗರ ಜೀವ ಬಾಯಿಗೆ ಬಂದಂತಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನೈನಿತಾಲ್: ಕೊರ್ಬೆಟ್ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಆನೆಯ ಆರ್ಭಟಕ್ಕೆ ಪ್ರವಾಸಿಗರ ಜೀವ ಬಾಯಿಗೆ ಬಂದಂತಾಯಿತು. 
ಹೌದು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆನೆಯ ಫೋಟೋವನ್ನು ತೆಗೆಯಲು ಪ್ರವಾಸಿಗರು ಮುಂದಾಗುತ್ತಾರೆ. ಈ ವೇಳೆ ಬೈಕ್ ಸವಾರನೊಬ್ಬ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಆಕ್ರೋಶಗೊಂಡ ಆನೆ ಆತನನ್ನ ಹಿಂಬಾಲಿಸುತ್ತದೆ. ಈ ವೇಳೆ ಜೀಪ್ ನಲ್ಲಿದ್ದ ಮಹಿಳೆಯರು ಆನೆಯ ಫೋಟೋವನ್ನು ತೆಗೆಯುತ್ತಿದ್ದು ಇದರಿಂದ ಆಕ್ರೋಶಗೊಂಡ ಆನೆ ವೇಗವಾಗಿ ಜೀಪ್ ನ ಬಳಿ ಬರುತ್ತದೆ. 
ಆಕ್ರೋಶಿತ ಆನೆ ತಮ್ಮ ಬಳಿ ಬರುತ್ತಿರುವುದನ್ನು ನೋಡಿದ ಮಹಿಳೆಯರು ಜೋರಾಗಿ ಕೂಗೂತ್ತ ಜೀಪ್ ಅನ್ನು ಚಲಾಯಿಸುವಂತೆ ಕಿರುಚುತ್ತಾರೆ. ಇನ್ನೇನು ಆನೆ ಜೀಪ್ ಹತ್ತಿರ ಬರುವಷ್ಟರಲ್ಲೇ ಜೀಪ್ ಮುಂದಕ್ಕೆ ಪಾಸಾಗಿದ್ದು ಹೋದ ಜೀವ ಬಂದಂತಾಗಿದೆ. 
ಇನ್ನು ಅಲ್ಲಿ ನಿಂತಿದ್ದ ಬೈಕ್ ಬಳಿ ಹೋದ ಆನೆ ಅದನ್ನು ತಳ್ಳಿ ಕೆಳಗೆ ಬೀಳಿಸುತ್ತದೆ. ಒಟ್ಟಿನಲ್ಲಿ ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಆನೆಯನ್ನು ಕೆಣಕಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com