ಚಂಡಮಾರುತದ ಅಬ್ಬರ: ಒಡಿಶಾ ರೈಲ್ವೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ 'ಫೋನಿ' ಎಂದು ನಾಮಕರಣ

ಒಡಿಶಾದಲ್ಲಿ ಫೋನಿ ಚಂಡಮಾರುತದ ಹಾವಳಿ ಭೀಕರವಾಗಿದ್ದು ಮೂವರು ಸಾವನ್ನಪ್ಪಿ ಹಲವರು ನಿರಾಶ್ರಿತರಾಗಿದ್ದಾರೆ. ಇತ್ತ ಈ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ಚಂಡಮಾರುತ....
ಒಡಿಶಾ ರೈಲ್ವೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ 'ಫೋನಿ' ಎಂದು ನಾಮಕರಣ
ಒಡಿಶಾ ರೈಲ್ವೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ 'ಫೋನಿ' ಎಂದು ನಾಮಕರಣ
ಭುವನೇಶ್ವರ್: ಒಡಿಶಾದಲ್ಲಿ ಫೋನಿ ಚಂಡಮಾರುತದ ಹಾವಳಿ ಭೀಕರವಾಗಿದ್ದು ಮೂವರು ಸಾವನ್ನಪ್ಪಿ ಹಲವರು ನಿರಾಶ್ರಿತರಾಗಿದ್ದಾರೆ. ಇತ್ತ ಈ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ಚಂಡಮಾರುತ ಪ್ರವೇಶಿಸುತ್ತಿದ್ದಂತೆ ಭುವನೇಶ್ವರದ ರೈಲ್ವೆ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಜನ್ಮ ನೀಡಿದ್ದ ಮಗುವಿಗೆ "ಫೋನಿ"  ಎಂದು ನಾಮಕರಣ ಮಾಡಲಾಗಿದೆ.
ಒಡಿಶಾ ರಾಜಧಾನಿ ಭುವನೇಶ್ವರದಿಂದ ಐದು ಕಿಮೀ ದೂರದ ಮಂಚೇಶ್ವರ ರೈಲ್ವೆ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಗ್ಗೆ 11.03ಕ್ಕೆಈ ಬೇಬಿ ಫೋನಿ  ಜನಿಸಿದೆ. 
ಮಗುವಿನ ತಾಯಿ ರೈಲ್ವೆ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಈಕೆ ಮಂಚೇಶ್ವರ ಕೋಚ್ ದುರಸ್ತಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೆರಿಗೆಯ ನಂತರ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಭುವನೇಶ್ವರದಲ್ಲಿನ ಪೂರ್ವ ಕರಾವಳಿ ರೈಲ್ವೆಯ ಪ್ರಧಾನ ಕಾರ್ಯಾಲಯ ಅಧಿಕಾರಿಗಳು ವಿವರಿಸಿದ್ದಾರೆ.
ಫೋನಿ  ಚಂಡಮಾರುತ ಒಡಿಶಾದಲ್ಲಿ ಭಾರೀ ಹಾನಿಯುಂಟು ಮಾಡಿದ್ದು ಚಂಡಮಾರುತದಿಂದ ತೊಂದರೆಗೊಳಗಾದ ರಾಜ್ಯಗಳಿಗೆ ಕೇಂದ್ರವು ಸಾವಿರ ಕೋಟಿ ರು. ಪರಿಹಾರ ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com