ದೆಹಲಿ: ಗೆಳತಿ ಜೊತೆ ಸೇರಿ ಪತ್ನಿಯನ್ನು ಹತ್ಯೆಗೈದ ಪತಿ; ಇಬ್ಬರೂ ಈಗ ಪೊಲೀಸರ ಅತಿಥಿ!

ಪತ್ನಿಯನ್ನು ಹತ್ಯೆಗೈದ ವ್ಯಕ್ತಿ ಹಾಗೂ ಆತನ ಗೆಳತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Published: 03rd May 2019 12:00 PM  |   Last Updated: 03rd May 2019 08:30 AM   |  A+A-


Delhi: Techie kills wife with girlfriend's help, duo held’

ದೆಹಲಿ: ಗೆಳತಿ ಜೊತೆ ಸೇರಿ ಪತ್ನಿಯನ್ನು ಹತ್ಯೆಗೈದ ಪತಿ; ಇಬ್ಬರೂ ಈಗ ಪೊಲೀಸರ ಅತಿಥಿ!

Posted By : SBV SBV
Source : The New Indian Express
ನವದೆಹಲಿ: ಪತ್ನಿಯನ್ನು ಹತ್ಯೆಗೈದ ವ್ಯಕ್ತಿ ಹಾಗೂ ಆತನ ಗೆಳತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 
                                                                                                                 
ರಾಹುಲ್ ಕುಮಾರ್ ಮಿಶ್ರಾ ಹಾಗೂ ಪದ್ಮಾ ತಿವಾರಿ ಬಂಧಿತ ಆರೋಪಿಗಳಾಗಿದ್ದು, ಪೂಜಾ ರೈ ನ್ನು ಹತ್ಯೆ ಮಾಡಿರುವ ಆರೋಪವನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹತ್ಯೆಯಾಗಿರುವ ಪೂಜಾ ರೈ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಮಿಶ್ರಾ ಹಾಗೂ ತಿವಾರಿ ಸಂಬಂಧದ ಬಗ್ಗೆ ಪತ್ನಿ ಪೂಜಾ ರೈ ಗೆ ಅನುಮಾನವಿತ್ತು. 

ಕಿಶನ್ಘರ್ ನಲ್ಲಿರುವ ಪೂಜಾ ರೈ ನಿವಾಸದಲ್ಲಿ ರಾಹುಲ್ ಕುಮಾರ್ ಮಿಶ್ರಾ ಹಾಗೂ ಪದ್ಮಾ ತಿವಾರಿ ಪೂಜಾ ರೈ ಗೆ ತಂಪು ಪಾನಿಯದಲ್ಲಿ ವಿಷ ಬೆರೆಸಿ ಕುಡಿಯಲು ನೀಡಿ ಹತ್ಯೆ ಮಾಡಿದ್ದಾರೆ. ನಂತರ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನಕಲಿ ಪತ್ರವೊಂದನ್ನು ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp