ಮಹಾಭಾರತ, ರಾಮಾಯಣ ತುಂಬಾ ಹಿಂಸಾಚಾರ ಘಟನೆಗಳೇ ತುಂಬಿವೆ: ಯೆಚೂರಿ

ಹಿಂದೂ ಧರ್ಮ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ ಹಿಂಸಾಚಾರದ ಘಟನೆಗಳೇ ತುಂಬಿವೆ ಎಂದು ಸಿಪಿಐ -ಎಂ ನಾಯಕ ಸೀತಾರಾಂ ಯೆಚೂರಿ ಟೀಕಿಸಿದ್ದು, ಬಿಜೆಪಿ ಸಮಾಜವನ್ನು ಹೊಡೆಯುವಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ.

Published: 03rd May 2019 12:00 PM  |   Last Updated: 03rd May 2019 04:57 AM   |  A+A-


Sitaram yechury

ಸೀತಾರಾಂ ಯೆಚೂರಿ

Posted By : ABN ABN
Source : PTI
ನವದೆಹಲಿ: ಹಿಂದೂ ಧರ್ಮ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ  ಹಿಂಸಾಚಾರದ ಘಟನೆಗಳೇ ತುಂಬಿವೆ ಎಂದು ಸಿಪಿಐ -ಎಂ ನಾಯಕ ಸೀತಾರಾಂ ಯೆಚೂರಿ  ಟೀಕಿಸಿದ್ದು, ಬಿಜೆಪಿ ಸಮಾಜವನ್ನು ಹೊಡೆಯುವಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ.

ಹಿಂದೂಗಳು ಹಿಂಸಾಚಾರದಲ್ಲಿ ನಂಬಿಕೆ ಇಲ್ಲ ಎಂದು ಸಾದ್ವಿ ಪ್ರಜ್ಞ್ಯಾ ಸಿಂಗ್ ಠಾಕೂರು ಹೇಳುತ್ತಾರೆ. ದೇಶದಲ್ಲಿ ಹಲವು ರಾಜರು ಹಾಗೂ ಸಂಸ್ಥಾನಗಳು ಹೋರಾಟ ನಡೆಸಿದ್ದಾರೆ. ರಾಮಾಯಣ ಹಾಗೂ ಮಹಾಭಾರತದಲ್ಲೂ ಕೂಡಾ ತೀವ್ರ ಹಿಂಸಾಚಾರವೇ ತುಂಬಿವೆ. ಆದರೂ ಪ್ರಚಾರಕರು ಹಿಂದೂಗಳಿಗೆ ಹಿಂಸಾಚಾರದಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ. ಇದರ ಹಿಂದಿನ ಸಿದ್ಧಾಂತ ಏನು ?  ಹಿಂಸಾಚಾರ ತುಂಬಿರುವ ಧರ್ಮದಲ್ಲಿ ನಾವು ನಾವು ಹಿಂದೂಗಳೆ ಇಲ್ಲ ಎಂದಿದ್ದಾರೆ

ಚುನಾವಣೆ ಸಂದರ್ಭದಲ್ಲಿ ಹಿಂದೂತ್ವ ಅಜೆಂಡಾ , ಸಂವಿಧಾನದ 35 ಎ ಹಾಗೂ 370 ವಿಧಾನ ರದ್ದು, ರಾಮ ಮಂದಿರ ನಿರ್ಮಾಣ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ.  ಸಾದ್ವಿ ಪ್ರಜ್ಞ್ಯಾ ಇಂತಹ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕಳಿಂಗ ಯುದ್ಧ ನಂತರ ಮೌರ್ಯ ಸಾಮ್ರಾಟರು ಬೌಧ್ದ ಧರ್ಮ ಸ್ವೀಕರಿಸಿದ್ದಾರೆ.  ಯಾರೇ ಆಗಲ್ಲೀ ಇನ್ನೊಂದು ಸಮುದಾಯದ ಮೇಲೆ ದಾಳಿ ಮಾಡಿದ್ದರೆ ತನ್ನ ಸಮುದಾಯಕ್ಕ ಹಾನಿ ಮಾಡಿದಂತೆ  ಎಂದು ಅಶೋಕನ ಶಾಸನಗಳು ಹೇಳುತ್ತವೆ. ಇದು ನಮ್ಮ ಸಂಪ್ರದಾಯವಾಗಿದೆ. ಬಿಜೆಪಿಯಿಂದ ಯಾರೂ ಪ್ರಚೋದನೆಗೆ ಒಳಗಾಗಬಾರದು ಎಂದು ಸಿಪಿಎಂ ನಾಯಕರು ಹೇಳಿದ್ದಾರೆ.

ಬಿಜೆಪಿ ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದು ಆರೋಪಿಸಿರುವ ಸೀತಾರಾಂ ಯೆಚೂರಿ, ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜನರ ಪ್ರಜಾಸತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp