ಹುಟ್ಟಿದಾಗ ರಾಹುಲ್ ಬಹಳ ಮುದ್ದಾಗಿದ್ದರು: ಕಾಂಗ್ರೆಸ್ ಅಧ್ಯಕ್ಷರ ಜನ್ಮರಹಸ್ಯ ಹೇಳಿದ ನಿವೃತ್ತ ನರ್ಸ್‌!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟಿದಾಗ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಾನು ತರಬೇತಿನಿರತ ದಾದಿ ೯ನರ್ಸ್) ಆಗಿದ್ದೆ, ನವಜಾತ ಶಿಶುವನ್ನೆತ್ತಿಕೊಂಡವರಲ್ಲಿ....
ಹುಟ್ಟಿದಾಗ ರಾಹುಲ್ ಬಹಳ ಮುದ್ದಾಗಿದ್ದರು: ಕಾಂಗ್ರೆಸ್ ಅಧ್ಯಕ್ಷರ ಜನ್ಮರಹಸ್ಯ ಹೇಳಿದ ನಿವೃತ್ತ ನರ್ಸ್‌!
ಹುಟ್ಟಿದಾಗ ರಾಹುಲ್ ಬಹಳ ಮುದ್ದಾಗಿದ್ದರು: ಕಾಂಗ್ರೆಸ್ ಅಧ್ಯಕ್ಷರ ಜನ್ಮರಹಸ್ಯ ಹೇಳಿದ ನಿವೃತ್ತ ನರ್ಸ್‌!
ಕೊಚ್ಚಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟಿದಾಗ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಾನು ತರಬೇತಿ ನಿರತ ದಾದಿ (ನರ್ಸ್) ಆಗಿದ್ದೆ,  ನವಜಾತ ಶಿಶುವನ್ನೆತ್ತಿಕೊಂಡವರಲ್ಲಿ ನಾನೇ ಮೊದಲಿಗಳು ಎಂದು ಕೇರಳ ಮೂಲದ ಓರ್ವ ನಿವೃತ್ತ ನರ್ಸ್ ಹೇಳಿದ್ದಾರೆ.
ರಾಹುಲ್ ಗಾಂಧಿ ಪೌರತ್ವದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ ವಯನಾಡ್ ನ 72 ವರ್ಷದ ನಿವೃತ್ತ ನರ್ಸ್ ರಾಜಮ್ಮ ವವಾತಿಲ್‌ ಕಾಂಗ್ರೆಸ್ ಅಧ್ಯಕ್ಷರ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
"ನಾನು ಅದೃಷ್ಟವಂತಳಾಗಿದ್ದೆ, ರಾಹುಲ್ ನವಜಾತ ಶಿಶುವಾಗಿದ್ದಾಗ ಕೈಗೆ ತೀಗೆದುಕೊಂಡಿದ್ದ ಕೆಲವರಲ್ಲಿ ನಾನು ಮೊದಲಿಗಳು.  ಅವರು ನೋಡಲು ಬಹಳ ಸುಂದರವಾಗಿದ್ದರು. ನಾನು ಅವರ ಜನ್ಮವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದೇನೆ. ಪ್ರಧಾನಿ ಇಂದಿರಾಗಾಂಧಿ ಮೊಮ್ಮಗನನ್ನು ಕಾಣಲು ನಾವು ತುದಿಗಾಲಲ್ಲಿ ನಿಂತು ಕಾದಿದ್ದೆವು" ವಯನಾಡ್ ನಿಂದ ದೂರವಾಣಿ ಮೂಲಕ ರಾಜಮ್ಮ ತಿಳಿಸಿದ್ದಾರೆ.
49 ವರ್ಷದ ನಂತರ ರಾಜಮ್ಮ ಈ ಘಟನೆ ನೆನಪಿಸಿಕೊಂಡಿದ್ದಾರೆ. ಈಗ ಆ ಮುದ್ದಾದ ಮಗು ಕಾಂಗ್ರೆಸ್ ಅಧ್ಯಕ್ಷರಾಗಿದ್ದು ವಯನಾಡ್ ನಿಂದ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
1970, ಜೂನ್‌ 19 ರಂದು ರಾಹುಲ್ ಗಾಂಧಿ ಹುಟ್ಟುವ ವೇಳೆ ರಾಜಮ್ಮ ನರ್ಸ್ ಆಗಿ ಸೇವೆಯಲ್ಲಿದ್ದರು.
ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿ ಮತ್ತು ಚಿಕ್ಕಪ್ಪ ಸಂಜಯ್ ಗಾಂಧಿ ಅವರು ಆಸ್ಪತ್ರೆಯ ಲೇಬರ್ ರೂಂ ನ ಆಚೆ ಕಾಯುತ್ತಿದ್ದರು. ಆಗ ಸೋನಿಯಾಗಾಧಿವರನ್ನು ಹೆರಿಗೆಗಾಗಿ ಕರೆದೊಯ್ಯಲಾಗಿತ್ತು ಎಂದು ಆಕೆ ನೆನಪಿಸಿಕೊಂಡಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ರಾಹುಲ್ ಪೌರತ್ವದ ಕುರಿತು ದೂರು ಸಲ್ಲಿಸಿರುವ ಬಗ್ಗೆ ರಾಜಮ್ಮನವರಿಗೆ ಖೇದವಿದೆ. ರಾಹುಲ್ ಗಾಂಧಿ ಭಾರತೀಯ ಪ್ರಜೆ ಎಂಬ ಬಗ್ಗೆ ಯಾರೂ ಅನುಮಾನಿಸುವುದು ಸರಿಯಲ್ಲ. ಅವರ ಪೌರತ್ವ ಬಗ್ಗೆ ಸ್ವಾಮಿ ನೀಡಿದ ದೂರು  "ಆಧಾರರಹಿತವಾಗಿದೆ" .ರಾಹುಲ್ ಜನ್ಮದ ಸಂಬಂಧ ಎಲ್ಲಾ ದಾಖಲೆಗಳೂ ಆಸ್ಪತ್ರೆಯಲ್ಲಿದೆ. ಎಂದು ಅವರು ಹೇಳಿದ್ದಾರೆ.
ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಿಂದ ತನ್ನ ನರ್ಸಿಂಗ್ ಕೋರ್ಸ್ ಮುಗಿಸಿದ ರಾಜಮ್ಮ ನಂತರ ಭಾರತೀಯ ಸೇನೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ.ಸೇವೆಯಿಂದ ವಿ.ಆರ್.ಎಸ್ ತೆಗೆದುಕೊಂಡ ನಂತರ, ಅವರು 1987 ರಲ್ಲಿ ಕೇರಳಕ್ಕೆ ಮರಳಿ ಈಗ ಸುಲ್ತಾನ್ ಬತೇರಿಯ ಕಲ್ಲೂರಿನಲ್ಲಿ ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com