ಜಮ್ಮು ಕಾಶ್ಮೀರ: ಭಯೋತ್ಪಾದಕರಿಂದ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಭಯೋತ್ಪಾದಕರು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕನೊಬ್ಬನನ್ನು ಗುಂಡಿಟ್ಟು ಕೊಂದಿರುವ ಘಟನೆ ಜಮ್ಮು ಕಾಶ್ಮೀರದ ನೌಗಮ್ ಎಂಬಲ್ಲಿ ನಡೆದಿದೆ.

Published: 04th May 2019 12:00 PM  |   Last Updated: 04th May 2019 11:18 AM   |  A+A-


Gul Mohd Mir

ಗುಲ್ ಮುಹಮ್ಮದ್ ಮಿರ್

Posted By : RHN RHN
Source : ANI
ಶ್ರೀನಗರ್: ಭಯೋತ್ಪಾದಕರು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕನೊಬ್ಬನನ್ನು ಗುಂಡಿಟ್ಟು ಕೊಂದಿರುವ ಘಟನೆ ಜಮ್ಮು ಕಾಶ್ಮೀರದ ನೌಗಮ್ ಎಂಬಲ್ಲಿ ನಡೆದಿದೆ. 

ಶನಿವಾರ ಸಂಜೆ ಶಂಕಿತ ಉಗ್ರರು ಬಿಜೆಪಿ ಕಾರ್ಯಕರ್ತ  ಗುಲ್ ಮುಹಮ್ಮದ್ ಮಿರ್  ಎಂಬುವವರನ್ನು ಹತ್ಯೆ ಮಾಡಿದ್ದಾರೆ.

ಗುಲ್ ಮುಹಮ್ಮದ್ ಮಿರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಅವರಿಗೆ 60  ವರ್ಷ ವಯಸ್ಸಾಗಿತ್ತು.  ದಕ್ಷಿಣ ಕಾಶ್ಮೀರದ ವೆರಿನಾಗ್ ನ ನೌಗಮ್ ಗ್ರಾಮದಲ್ಲಿ ಘಟನೆ ನಡೆದಿದ್ದು ಸ್ಥಳವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.

ಮಿರ್ ಅವರನ್ನು ನೌಗಮ್ ಗ್ರಾಮದ ಅವರ ಮನೆಯಲ್ಲೇ ಅಪರಿಚಿತ ಉಗ್ರರು  ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 
ಬಿಜೆಪಿ ರಾಜ್ಯ ವಕ್ತಾರ ಅಲ್ತಾಫ್ ಠಾಕೂರ್ ಮಾತನಾಡಿ , ಗುಲ್ ಮುಹಮ್ಮದ್ ಮಿರ್ ಅವರನ್ನು ಶಂಕಿತ ಉಗ್ರಗಾಮಿಗಳು  ಅವರ ಮನೆಯಲ್ಲೇ ಈ ಸಂಜೆ ಹತ್ಯೆಗೈದಿದ್ದಾರೆ. ಎಂದು ತಿಳಿಸಿದ್ದಾರೆ.ಅಲ್ಲದೆ ಇದೊಂದು ದುರ್ಘಟನೆ ಎಂದೂ ಠಾಕೂರ್ ಹೇಳಿದ್ದಾರೆ, "ದುಷ್ಕರ್ಮಿಗಳು ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಮಿರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕುಳಿಯಲಿಲ್ಲ" ಅವರು ವಿವರಿಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷೆಯಲ್ಲಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp