ರಸ್ತೆಯಲ್ಲೇ ರಾಸಲೀಲೆ: ಚಲಿಸುತ್ತಿದ್ದ ಬೈಕ್ ಮೇಲೆ ಯುವಕನ ತುಟಿಗೆ ಕಿಸ್ ಕೊಟ್ಟ ಯುವತಿ; ವಿಡಿಯೋ ವೈರಲ್!

ವಾಹನ ಸಂಚಾರ ದಟ್ಟನೆ ಮಧ್ಯೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ಯುವಕನನ್ನ ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಾಹನ ಸಂಚಾರ ದಟ್ಟನೆ ಮಧ್ಯೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ಯುವಕನನ್ನ ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಐಪಿಎಸ್ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಅವರು 18 ಸೆಕೆಂಡ್ ಗಳ ಈ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದ್ದು ಈ ಸಂಬಂಧ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ರಜೋರಿ ಗಾರ್ಡನ್ ಕ್ರಾಸಿಂಗ್ ಬಳಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com