ಫೋನಿ ಚಂಡಮಾರುತ ಎಫೆಕ್ಟ್: ಆಂಧ್ರ ಪ್ರದೇಶಕ್ಕೆ ಬಿಸಿಗಾಳಿ ಎಚ್ಚರಿಕೆ!

ಒಡಿಶಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ್ದ ಫೋನಿ ಚಂಡಮಾರುತದ ಅಬ್ಬರ ತಗ್ಗಿದ ಬೆನ್ನಲ್ಲೇ ನೆರೆಯ ಆಂಧ್ರ ಪ್ರದೇಶಕ್ಕೆ ಹೊಸ ತಲೆನೋವು ಶುರುವಾಗಿದ್ದು ಬಿಸಿಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ಒಡಿಶಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ್ದ ಫೋನಿ ಚಂಡಮಾರುತದ ಅಬ್ಬರ ತಗ್ಗಿದ ಬೆನ್ನಲ್ಲೇ ನೆರೆಯ ಆಂಧ್ರ ಪ್ರದೇಶಕ್ಕೆ ಹೊಸ ತಲೆನೋವು ಶುರುವಾಗಿದ್ದು ಬಿಸಿಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆಂಧ್ರ ಪ್ರದೇಶದ ಮಚಲೀಪಟ್ಟಣಂ ಕರಾವಳಿ ತೀರದಲ್ಲಿ ಫೋನಿ ಚಂಡಮಾರುತ ಅಬ್ಬರಿಸಿ ಹೋದ ಬೆನ್ನಲ್ಲೇ ಚಂಡಮಾರುತದ ಪರಿಣಾಮದಿಂದ ಆಂಧ್ರಪ್ರದೇಶದ ಕರಾವಳಿ ತೀರದ ಜಿಲ್ಲೆಗಳಲ್ಲಿ ತೇವಾಂಶದ ಕೊರತೆ ಉಂಟಾಗುವ ಭೀತಿ ಎದುರಾಗಿದೆ. ಅಲ್ಲದೆ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿದ್ದು, ಕರಾವಳಿ ತೀರಕ್ಕೆ ಬಿಸಿಗಾಳಿ ಬೀಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ಎರಡು-ಮೂರು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆಗಳಿದ್ದು, ಆಂಧ್ರ ಪ್ರದೇಶದ ಕೃಷ್ಣ, ಗುಂಟೂರು, ಪ್ರಕಾಶಂ, ನೆಲ್ಲೂರು ಹಾಗೂ ವಿಶಾಖಪಟ್ಟಣಂ ಸೇರಿದಂತೆ ಕರಾವಳಿಯ ಕೆಲ ಭಾಗಗಳಲ್ಲಿ ಮತ್ತು ಕಡಪ, ಕರ್ನೂಲು, ಚಿತ್ತೂರಿನಲ್ಲಿ ಬಿಸಿಗಾಳಿ ಬೀಸುವ ಸೂಚನೆ ಇದೆ. ಶೆಖೆ ಹೆಚ್ಚಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ಅವಧಿಯೊಳಗೆ ಬಿಸಿಲಿಗೆ ಓಡಾಡದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com