ಮೋದಿಜೀ ನೀವು ರಾಜೀವ್ ಗಾಂಧಿಯಿಂದ ಕಲೀಬೇಕಾದ್ದು ಬಹಳವಿದೆ: ಪ್ರಧಾನಿಗೆ ರಮ್ಯಾ ಬುದ್ದಿವಾದ

ರಾಹುಲ್ ಗಾಂಧಿ ತಮ್ಮ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿಯವರು "ಚೌಕಿದಾರ್ ಚೋರ್" ಎಂದು ಹೇಳಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಈಗ ಪ್ರಧಾನಿ ಮೋದಿ ತಮ್ಮ ಪ್ರಚಾರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು "ಅತಿಭ್ರಷ್ಟ ಪ್ರಧಾನಿ" ಎಂದಿದಿದ್ದಕ್ಕೆ....
ರಮಾ ಹಾಗೂ ಪ್ರಧಾನಿ ಮೋದಿ
ರಮಾ ಹಾಗೂ ಪ್ರಧಾನಿ ಮೋದಿ
ನವದೆಹಲಿ: ರಾಹುಲ್ ಗಾಂಧಿ ತಮ್ಮ ಚುನಾವಣಾ ಪ್ರಚಾರದಲ್ಲಿ ನರೇಂದ್ರ  ಮೋದಿಯವರು "ಚೌಕಿದಾರ್ ಚೋರ್" ಎಂದು ಹೇಳಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ  ಹಾಕಿಸಿಕೊಂಡಿದ್ದರು. ಈಗ ಪ್ರಧಾನಿ ಮೋದಿ ತಮ್ಮ ಪ್ರಚಾರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು "ಅತಿಭ್ರಷ್ಟ ಪ್ರಧಾನಿ" ಎಂದಿದಿದ್ದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಕಿಡಿ ಕಿಡಿಯಾಗಿದ್ದಾರೆ.
ಕಾಂಗ್ರೆಸ್ ನ ಸಾಮಾಜಿಕ ತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ತಮ್ಮ ಸರಣಿ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 
"ಪ್ರಧಾನಿ ನರೇಂದ್ರ ಮೋದಿಜಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಎಲ್ಲರೂ ಬಹಳ ಗೌರವ ತೋರಿಸುತ್ತಿದ್ದರು ಅವರು ಮಾನವೀಯ ಗುಣಗಳನ್ನು ಹೊಂದಿದ್ದರು. ಅಂತಹಾ ವ್ಯಕ್ತಿಯಿಂದ ನೀವು ಕಲಿಯಬೇಕಾದದ್ದು ಬಹಳಷ್ಟಿದೆ. ಶೇಮ್ ಆನ್ ಪಿಎಂ ಮೋದಿ" ಎಂದು ರಮ್ಯಾ ಟ್ವಿಟ್ ಮಾಡಿದ್ದಾರೆ.
"ನಾನು ರಾಜೀವ್ ಗಾಂಧಿ ಸತ್ತ ಸಮಯದಲ್ಲಿ ಎಂಟು ವರ್ಷದ ಬಾಲಕಿಯಾಗಿದ್ದೆ, ದೇಶದಲ್ಲಿ ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಈ ಸುದ್ದಿ ಕೇಳಿ ಅಳುತ್ತಿದ್ದರು ನಾನು ಸಹ ಅತ್ತಿದ್ದೆ, ಆ ದಿನವನ್ನು ನನಗೆ ಮರೆಯಲು ಸಾಧ್ಯವಿಲ್ಲ " ರಮ್ಯಾ ಹೇಳಿದ್ದಾರೆ.

Rajiv Gandhi ji was respected and loved by everyone & I wish that upon you too Modi ji. Maybe you can learn something from him- kindness. #ShameOnPMModi

— Divya Spandana/Ramya (@divyaspandana) May 5, 2019
ಪ್ರಧಾನಿ ತಮ್ಮ ಚುನಾವಣೆಯ ಲಾಭಕ್ಕಾಗಿ ಇಂತಹಾ ಕೀಳು ಮಾತನ್ನಾಡಿದ್ದಾರೆ, ರಾಜೀವ್ ಜೀ ಬಗ್ಗೆ ಮೋದಿಜೀ ಆಡಿರುವ ಈ ಮಾತನ್ನು ಯಾರೂ ನಂಬುವುದಿಲ್ಲ ಎಂದು ರಮ್ಯಾ ಹೇಳೀದ್ದಾರೆ.

I remember as a 8 year old traveling in a bus with my mother when the news of Rajiv ji’s death came, people were overcome with emotion, they burst out crying. #ShameOnPMModi

— Divya Spandana/Ramya (@divyaspandana) May 5, 2019
 

And so when I heard Modi’s comments on Rajiv ji, at first I was taken aback, couldn’t believe anyone would say something like that, even if it means it’s elections, but Modi had. And Modi is full of new lows.#ShameonModi

— Divya Spandana/Ramya (@divyaspandana) May 5, 2019
ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ರಾಹುಲ್ ಜೀ, ನಿಮ್ಮ ತಂದೆಯವರನ್ನು "ಮಿಸ್ಟರ್ ಕ್ಲೀನ್" ಎನ್ನಲಾಗುತ್ತದೆ. ಆದರೆ ಆ ವ್ಯಕ್ತಿ ಸತ್ತದ್ದು ನಂಬರ್ ಒನ್ ಭ್ರಷ್ತಾಚಾರಿಯಾಗಿ ಎಂದು ಹೇಳಿದ್ದರು. ಇದು ರಾಹುಲ್ ಗಾಂಧಿ ಸೇರಿ ಅನೇಕ ಕಾಂಗ್ರೆಸ್ಸಿಗರ ಹುಬ್ಬೇರುವಂತೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ "ಯುದ್ಧ ಮುಗಿದಿದೆ, ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ" ಎಂದು ಪ್ರತಿದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com