ಸಿಜೆಐ ವಿರುದ್ಧ ಲೈಂಗಿಕ ದೌರ್ಜನ್ಯ ದೂರಿನ ಹಿಂದೆ ಕಾಣದ ಶಕ್ತಿಗಳ ಕೈವಾಡ: ಬಿಸಿಐ ಶಂಕೆ!

ಮುಖ್ಯ ನ್ಯಾಯಮೂರ್ತಿ ರಂಜನ್ ಗಗೊಯ್ ಅವರ ವಿರುದ್ದ ದಾಖಲಾಗಿರುವ ಲೈಂಗಿಕ ದೌರ್ಜನ್ಯ ದೂರಿನ ಹಿಂದೆ ಕಾಣದ ಶಕ್ತಿಗಳ ಕೈವಾಡ ಇದೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಬಲವಾದ ಶಂಕೆ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮುಖ್ಯ ನ್ಯಾಯಮೂರ್ತಿ ರಂಜನ್ ಗಗೊಯ್ ಅವರ ವಿರುದ್ದ ದಾಖಲಾಗಿರುವ ಲೈಂಗಿಕ ದೌರ್ಜನ್ಯ ದೂರಿನ ಹಿಂದೆ ಕಾಣದ ಶಕ್ತಿಗಳ ಕೈವಾಡ ಇದೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಬಲವಾದ ಶಂಕೆ ವ್ಯಕ್ತಪಡಿಸಿದೆ.
ಈ ಬಗ್ಗೆ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಐ (ಬಾರ್ ಕೌನ್ಸಿಲ್ ಆಫ್ ಇಂಡಿಯಾ) ( ಭಾರತೀಯ ವಕೀಲರ ಪರಿಷತ್ತು)'ಸುಪ್ರೀಂ ಕೋರ್ಟ್ ನ ಮಾಜಿ ಮಹಿಳಾ ಉದ್ಯೋಗಿ ಮಾಡಿದ್ದ ಲೈಂಗಿಕ ಕಿರುಕುಳ ಆರೋಪದಲ್ಲಿ  “ಯಾವುದೂದುರುದ್ದೇಶ” ಇರುವಂತೆ ಕಂಡು ಬುರುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ.
'ದೇಶದ ಸಾಮನ್ಯ ಜನರು ಮೂರ್ಖರಲ್ಲ, ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ದೂರಿನ ಹಿಂದೆ ಬಲವಾದ ಶಕ್ತಿಗಳಿವೆ ಎಂಬುದನ್ನು ಆರ್ಥಮಾಡಿಕೊಳ್ಳುತ್ತಾರೆ. ದೂರು ನೀಡಿರುವ ವ್ಯಕ್ತಿ ಸಾಮಾನ್ಯ ಮಹಿಳೆಯಲ್ಲ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಸಿಜೆಐ ವಿರುದ್ಧ ನೀಡಿರುವ ದೂರುಗಳನ್ನು ಮತ್ತು ಹೊರಿಸಿರುವ ಆರೋಪಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರೆ, ಖಂಡಿತಾ ಅನುಮಾನ ಮೂಡುತ್ತದೆ. ದೂರು ನೀಡಿರುವ ಮಹಿಳೆ ಸಿಜೆಐ ತನ್ನ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿರುವುದಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಆಧಾರ ಕೇಳಿದಾಗ ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸಿಲ್ಲ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತಾ ದೂರಿನ ಕುರಿತು ಅನುಮಾನ ಮಾಡುತ್ತದೆ. ಯಾವುದೇ ರೀತಿಯ ಎಫ್ ಐಆರ್ ದಾಖಲಿಸದೇ ನೇರವಾಗಿ ಸುಪ್ರೀಂ ಕೋರ್ಟ್ ನಲ್ಲೇ ಮಹಿಳೆ ಅರ್ಜಿ ದಾಖಲಿಸಿದ್ದಾರೆ. ಇಂದು ಖಂಡಿತಾ ಅನುಮಾನ ಮೂಡಿಸುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಸಿಜೆಐ ವಿರುದ್ಧ ಪ್ರಕರಣವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪಿಗೂ ಬೆಂಬಲ ನೀಡಿರುವ ಬಿಸಿಐ, ತ್ರಿಸದಸ್ಯ ಪೀಠದ ತೀರ್ಪಿನ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ತೀರ್ಪು ಸರಿಯಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com