ಕೆಸಿಆರ್ ತೃತೀಯ ರಂಗ ರಚನೆ ಯತ್ನಕ್ಕೆ ಹಿನ್ನಡೆ, ತೆಲಂಗಾಣ ಸಿಎಂ ಭೇಟಿಗೆ ಸ್ಟಾಲಿನ್ ನಕಾರ ಸಾಧ್ಯತೆ

ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಮೇ 13ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡದಿರಲು ನಿರ್ಧರಿಸಿದ್ದು,....
ಕೆ ಚಂದ್ರಶೇಖರ್ ರಾವ್
ಕೆ ಚಂದ್ರಶೇಖರ್ ರಾವ್
ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಮೇ 13ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡದಿರಲು ನಿರ್ಧರಿಸಿದ್ದು, ಕೆಸಿಆರ್ ಅವರ ಕಾಂಗ್ರೆಸ್-ಬಿಜೆಪಿಯೇತರ ತೃತೀಯ ರಂಗ ರಚನೆಯ ಯತ್ನಕ್ಕೆ ಹಿನ್ನಡೆಯಾಗಿದೆ.
ಮೇ 13ರಂದು ಸ್ಟಾಲಿನ್ ಭೇಟಿ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಆದರೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರು ಮೇ 19ರಂದು ನಡೆಯುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ಇದಕ್ಕು ಮುನ್ನ ಚಂದ್ರಶೇಖರ್ ರಾವ್ ಅವರು ಮೇ 13ರಂದು ಸ್ಟಾಲಿನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತೆಲಂಗಾಣ ಸಿಎಂ ಕಚೇರಿ ಪ್ರಕಟಣೆಯಲ್ಲಿ ತಿಳಿಸಿತ್ತು.
ಕೆಸಿಆರ್ ಅವರು ನಿನ್ನೆಯಷ್ಟೇ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಭೇಟಿ ಮಾಡಿ, ತೃತೀಯ ರಂಗ ರಚನೆಯ ಕುರಿತು ಚರ್ಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com