ವಾಯುಸೇನೆ ಬತ್ತಳಿಕೆ ಸೇರಲಿವೆ ಇಸ್ರೇಲ್ ನಿರ್ಮಿತ 'ಸ್ಪೈಸ್ 2000' ಬಾಂಬ್ ನ ಹೊಸ ಅವತರಣಿಕೆ!

ಬಾಲಾಕೋಟ್ ಉಗ್ರ ಕ್ಯಾಂಪ್ ಧ್ವಂಸ ಮಾಡಿದ್ದ ಇಸ್ರೇಲ್ ನಿರ್ಮಿತ 'ವಿಧ್ವಂಸಕ ಬಂಕರ್ ಬಸ್ಟರ್''ಸ್ಪೈಸ್ 2000' ಬಾಂಬ್ ನ ಹೊಸ ಅವತರಣಿಕೆಯ ಬಾಂಬ್ ಗಳನ್ನು ಖರೀದಿ ಮಾಡಲು ಭಾರತೀಯ ವಾಯುಸೇನೆ ಮುಂದಾಗಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಲಾಕೋಟ್ ಉಗ್ರ ಕ್ಯಾಂಪ್ ಧ್ವಂಸ ಮಾಡಿದ್ದ ಇಸ್ರೇಲ್ ನಿರ್ಮಿತ 'ವಿಧ್ವಂಸಕ ಬಂಕರ್ ಬಸ್ಟರ್''ಸ್ಪೈಸ್ 2000' ಬಾಂಬ್ ನ ಹೊಸ ಅವತರಣಿಕೆಯ ಬಾಂಬ್ ಗಳನ್ನು ಖರೀದಿ ಮಾಡಲು ಭಾರತೀಯ ವಾಯುಸೇನೆ ಮುಂದಾಗಿದೆ ಎನ್ನಲಾಗಿದೆ.
ಈ ಬಗ್ಗೆ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಕೇಂದ್ರ ಸರ್ಕಾರ ಸೇನೆಯ ಮೂರು ದಳಗಳಿಗೂ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ತಲಾ 300 ಕೋಟಿ ರೂ ಗಳನ್ನು ಮೀಸಲಾಗಿರಿಸಿದ್ದು, ಈ ಪೈಕಿ ವಾಯುಸೇನೆ ತನ್ನ ಪಾಲಿನ 300 ಕೂಟಿ ರೂಗಳ ಹಣದಲ್ಲಿ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಸರಣಿಯ ಹೊಸ ಅವತರಣಿಕೆಗಳನ್ನು ಖರೀದಿ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ವಾಯುಸೇನೆ ಸ್ಪೈಸ್ 2000 ಮಾರ್ಕ್ 84 ಸರಣಿಯ ಬಾಂಬ್ ಗಳನ್ನು ಖರೀದಿ ಮಾಡಲು ಉತ್ಸುಕವಾಗಿದ್ದು, ಈ ಸಂಬಂಧ ಇಸ್ರೇಲ್ ಸರ್ಕಾರದೊಂದಿಗೆ ಶೀಘ್ರ ಚರ್ಚೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಭಾರತೀಯ ಸೇನೆ ತನ್ನ ಪಾಲಿನ 300 ಕೋಟಿ ರೂಗಳಲ್ಲಿ ಸ್ಪೈಕ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಗಳನ್ನು ಗಡಿಯಲ್ಲಿ ನಿಯೋಜನೆ ಮಾಡವು ಮುಂದಾಗಿದೆ ಎನ್ನಲಾಗಿದೆ.
ಪುಲ್ವಾಮದಲ್ಲಿ ಸೇನಾಪಡೆಗಳ ವಾಹನಗಳ ಮೇಲೆ ಉಗ್ರರು ನಡೆಸಿದ್ದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 44 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಭಾರತೀಯ ವಾಯುಸೇನೆ ಬಾಲಾಕೋಟ್ ನಲ್ಲಿದ್ದ ಜೈಶ್ ಇ ಮೊಹಮದ್ ಉಗ್ರ ಕ್ಯಾಂಪ್ ಗಳ ಮೇಲೆ ವಾಯು ದಾಳಿ ನಡೆಸಿತ್ತು. ಈ ವೇಳೆ ಮಿರಾಜ್ 2000 ಯುದ್ಧ ವಿಮಾನಕ್ಕೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಅಳವಡಿಸಿ ದಾಳಿ ನಡೆಸಲಾಗಿತ್ತು. ಸ್ಪೈಸ್ 2000 ಬಾಂಬ್ ಗಳು ಬಾಲಾಕೋಟ್ ನಲ್ಲಿದ್ದ ಜೆಇಎಂ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದವು. 
ಬಂಕರ್ ಬಸ್ಟರ್: ಸ್ಪೈಸ್ 2000 ವಿಶೇಷತೆ
ಇನ್ನು ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಬಂಕರ್ ಬಸ್ಟರ್ ಎಂದೇ ಕರೆಯಲಾಗುತ್ತದೆ. ಶತ್ರುಪಾಳಯದ ಬಂಕರ್ ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಅವುಗಳನ್ನು ಛಿದ್ರಗೊಳಿಸುವ ಸಾಮರ್ಥ್ಯ ಈ ಬಾಂಬ್ ಗಳಿಗಿದೆ. ಅಲ್ಲದೆ ಎಷ್ಟೇ ಬಲಿಷ್ಟ ಕಟ್ಟಡಗಳಾದರೂ ಕ್ಷಣಮಾತ್ರದಲ್ಲಿ ಸ್ಫೋಟಿಸಿ ಧರೆಗುರುಳಿಸುತ್ತದೆ. ಅಲ್ಲದೆ ಈ ಸ್ಪೈಸ್ 2000 ಬಾಂಬ್ ಗಳು ಲೇಸರ್ ಗೈಡೆಡ್ ಬಾಂಬ್ ಗಳಾಗಿದ್ದು, ಗುರಿಗಳನ್ನು ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಎಂತಹುದೇ ಪರಿಸ್ಥಿತಿಯಲ್ಲೂ ಗುರಿಗಳನ್ನು ನಿಖರವಾಗಿ ಬೇದಿಸುವ ಸಾಮರ್ಥ್ಯವನ್ನು ಈ ಬಾಂಬ್ ಗಳು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com