ಸಡೆರ್ಕೋಟ್ ಬಾಲಾ ಹತ್ಯಾಕಾಂಡ: 23 ವರ್ಷಗಳ ಬಳಿಕ ಆರೋಪಿಯ ಬಂಧನ

ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಸಡೆರ್ಕೋಟ್ ಬಾಲಾ ಹತ್ಯಾಕಾಂಡದ ಆರೋಪಿಯನ್ನು ಬರೊಬ್ಬರಿ 23 ವರ್ಷಗಳ ನಂತರ ಬಂಧಿಸಲಾಗಿದೆ.
ಸಡೆರ್ಕೋಟ್ ಬಾಲಾ ಹತ್ಯಾಕಾಂಡ: 23 ವರ್ಷಗಳ ಬಳಿಕ ಆರೋಪಿಯ ಬಂಧನ
ಸಡೆರ್ಕೋಟ್ ಬಾಲಾ ಹತ್ಯಾಕಾಂಡ: 23 ವರ್ಷಗಳ ಬಳಿಕ ಆರೋಪಿಯ ಬಂಧನ
ಸಡೆರ್ಕೋಟ್ ಬಾಲಾ: ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಸಡೆರ್ಕೋಟ್ ಬಾಲಾ ಹತ್ಯಾಕಾಂಡದ ಆರೋಪಿಯನ್ನು ಬರೊಬ್ಬರಿ 23 ವರ್ಷಗಳ ನಂತರ ಬಂಧಿಸಲಾಗಿದೆ. 
ವಾಲಿ ಮೊಹಮ್ಮದ್ ಮಿರ್ ಬಂಧಿತ ಆರೋಪಿಯಾಗಿದ್ದು, ರಾಜ್ಯ ಪೊಲೀಸರು ಆತನನ್ನು ಬರ್ವಾಲ ಕಂಗನ್ ಗ್ರಾಮದಿಂದ ಬಂಧಿಸಿದ್ದಾರೆ.
ಬಂಧಿತ ಆರೋಪಿ, 1990 ರಲ್ಲಿ ಜಮ್ಮು-ಕಾಶ್ಮೀರದ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ, ಶರಣಾಗತರಾಗಿದ್ದ ಭಯೋತ್ಪಾದಕರ ಗುಂಪು ಇಖ್ವಾನ್ ನ ಸದಸ್ಯನಾಗಿದ್ದಾನೆ.
1996 ರಲ್ಲಿ ಇಖ್ವಾನ್ ಉಗ್ರರ ಗುಂಪು ಸಡೆರ್ಕೋಟ್ ಬಾಲಾದಲ್ಲಿ ಒಂದೇ ಕುಟುಂಬದ 5 ಪುರುಷರು ಇಬ್ಬರು ಮಹಿಳೆಯರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಆದರೆ ಈತ ಮಾತ್ರ ತಪ್ಪಿಸಿಕೊಂಡಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com