ಯುಪಿಎ ಆಡಳಿತದಲ್ಲಿ ಸರ್ಜಿಕಲ್ ದಾಳಿ ನಡೆದ ಉಲ್ಲೇಖವಿಲ್ಲ: ರಕ್ಷಣಾ ಸಚಿವಾಲಯ

2016ರ ಮುನ್ನ, ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ಯಾವ ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಉಲ್ಲೇಖವಿಲ್ಲ ಎಂದು ಭಾರತೀಯ ಸೇನಾ ಡೈರಕ್ಟರ್ ಜನರಲ್ ಹೇಳಿದ್ದಾರೆ

Published: 08th May 2019 12:00 PM  |   Last Updated: 08th May 2019 12:12 PM   |  A+A-


For representational purposes

ಸಂಗ್ರಹ ಚಿತ್ರ

Posted By : RHN RHN
Source : The New Indian Express
ನವದೆಹಲಿ: 2016ರ ಮುನ್ನ, ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ಯಾವ ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಉಲ್ಲೇಖವಿಲ್ಲ ಎಂದು ಭಾರತೀಯ ಸೇನಾ ಡೈರಕ್ಟರ್ ಜನರಲ್ ಹೇಳಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ಸೇನಾಪಡೆ ಮೂಲಗಳು ಈ ಉತ್ತರ ನೀಡಿದೆ.

ಸೇನಾ ಮೂಲಗಳು ಹೇಳಿರುವಂತೆ"ಸೆಪ್ಟೆಂಬರ್ 29, 2016ರ ಮುನ್ನ ಪಾಕಿಸ್ತಾನದ ವಿರುದ್ಧ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿರುವ ದಾಕಲೆಗಳಿಲ್ಲ." ಆರ್ಟಿಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಉತ್ತರ ಬಂದಿದೆ. ಸೇನೆ ಡೈರಕ್ಟರ್ ಜನರಲ್ ಮತ್ತು ಅವರ ಕಛೇರಿ ಈ ಮಾಹಿತಿ ನೀಡಿದೆ. 

ಜಮ್ಮು ಮೂಲದ ಸಾಮಾಜಿಕ ಕಾರ್ಯಕರ್ತ ರೋಹಿತ್ ಚೌಧರಿ ಎಂಬುವವರು  2004ರಿಂದ 2014ರ ನಡುವೆ ಪಾಕಿಸ್ತಾನದ ಮೇಲೆ ಯಾವುದೇ ಬಗೆಯ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದವೆ,  ನಡೆದಿದ್ದಾದರೆ ಆ ಬಗ್ಗೆ ಮಾಹಿತಿ ನೀಡಿ ಎಂದು ಆರ್ಟಿಐ ಕಾನೂನಿನಡಿ ಅರ್ಜಿ ಸಲ್ಲಿಸಿದ್ದರು.

ಉರಿ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಸೆಪ್ಟೆಂಬರ್ 2016ರಲ್ಲಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿತ್ತು. 

ಈ ಅವಧಿಗೆ ಮುನ್ನ ಭಾರತೀಯ ಸೇನೆ ಎಂದೂ ಅಂತಹಾ ದಾಳಿ ನಡೆಸಿರುವ ಮಾಹಿತಿ ಇಲ್ಲ, ಯಾವುದೇ ಸೈನಿಕರು ಗಾಯಗೊಂಡಿರುವ ಅಥವಾ ಹುತಾತ್ಮರಾಗಿರುವ ಮಾಹಿತಿ ಇಲ್ಲ ಎಂದು ಡಿಜಿಎಂಒ ಹೇಳಿದೆ.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆರು ಬಾರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿಗಳಾಗಿದ್ದವು ಎಂದು ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಹೇಳಿದ್ದರು. ಆದರೆ ನರೇಂದ್ರ ಮೋದಿ ಇದನ್ನು ಅಲ್ಲಗೆಳೆದಿದ್ದು "ಕಾಂಗ್ರೆಸ್ ಅವಧಿಯಲ್ಲಿ ವೀಡಿಯೋ ಗೇಮ ಗಳಲ್ಲಿ ಈ ಸರ್ಜಿಕಲ್ ದಾಳಿಗಳಾಗಿದ್ದವು" ಎಂದು ಟೀಕಿಸಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp