ಕಾರ್ಯಕ್ಷಮತೆ ತೋರದ 1,200 ಐಪಿಎಸ್ ಅಧಿಕಾರಿಗಳ ಮೇಲೆ ತೂಗುಗತ್ತಿ!

ಕಾರ್ಯಕ್ಷಮತೆ ಪ್ರದರ್ಶಿಸದ 1,200 ಐಪಿಎಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದ್ದು, ಗೃಹ ಸಚಿವಾಲಯ ಇಂತಹ ಅಧಿಕಾರಗಳ ಮೇಲೆ ಕಣ್ಣಿಟ್ಟಿದೆ.
ಕಾರ್ಯಕ್ಷಮತೆ ಪ್ರದರ್ಶಿಸದ 1,200 ಐಪಿಎಸ್ ಅಧಿಕಾರಿಗಳ ಮೇಲೆ ತೂಗುಗತ್ತಿ!
ಕಾರ್ಯಕ್ಷಮತೆ ಪ್ರದರ್ಶಿಸದ 1,200 ಐಪಿಎಸ್ ಅಧಿಕಾರಿಗಳ ಮೇಲೆ ತೂಗುಗತ್ತಿ!
ನವದೆಹಲಿ: ಕಾರ್ಯಕ್ಷಮತೆ ಪ್ರದರ್ಶಿಸದ 1,200 ಐಪಿಎಸ್ ಅಧಿಕಾರಿಗಳಿಗೆ ಸಂಕಷ್ಟ  ಎದುರಾಗಿದ್ದು, ಗೃಹ ಸಚಿವಾಲಯ ಇಂತಹ ಅಧಿಕಾರಗಳ ಮೇಲೆ ಕಣ್ಣಿಟ್ಟಿದೆ. 
ಕಳೆದ 3 ವರ್ಷಗಳಲ್ಲಿ 1,181 ಐಪಿಎಸ್ ಅಧಿಕಾರಿಗಳ ಸೇವಾ ದಾಖಲೆಗಳನ್ನು ಪುನಃಪರಿಶೀಲನೆ ನಡೆಸಿರುವ ಗೃಹ ಸಚಿವಾಲಯ, ಪರಿಶೀಲನೆ ಸತತವಾಗಿ ನಡೆಯಲಿದ್ದು, ಅಧಿಕಾರಿಗಳ ಪಟ್ಟಿ ಇನ್ನೂ ಬೆಳೆಯುವ ಸಾಧ್ಯತೆ ಇದೆ ಎಂದು ಹೇಳಿದೆ. 
ಕಾರ್ಯಕ್ಷಮತೆ ಪ್ರದರ್ಶಿಸದ ಅಧಿಕಾರಿಗಳ ಮೇಲೆ ನಿಗಾವಹಿಸುವುದಕ್ಕೆ ಅನುಮತಿ ನೀಡಿರುವ ಕಾನೂನಿನ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದ್ದು, ಅಂತಹ ಅಧಿಕಾರಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕನಿಷ್ಟ 3 ತಿಂಗಳು ಮುಂಚಿತವಾಗಿ ನೊಟೀಸ್ ಜಾರಿ ಮಾಡಿ ನಿವೃತ್ತಿ ಪಡೆಯುವಂತೆ ಸೂಚನೆ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com