ಯಶ್ವಂತ್ ಸಿನ್ಹಾ
ಯಶ್ವಂತ್ ಸಿನ್ಹಾ

ಮೋದಿಯನ್ನು ಪಕ್ಷದಿಂದ ವಜಾಗೊಳಿಸಲು ವಾಜಪೇಯಿ ನಿರ್ಧರಿಸಿದ್ದು ಏಕೆ? ಅದನ್ನು ತಡೆದದ್ದು ಯಾರು?

ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು ಎಂದು ಬಿಜೆಪಿ ಮಾಜಿ ನಾಯಕ ...
ಭೂಪಾಲ್: 2002 ರ ಗೋಧ್ರೋತ್ತರ ಹತ್ಯಾಕಾಂಡದ ನಂತರ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು ಎಂದು ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ. 

ಭೂಪಾಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿನ್ಹಾ,  2002 ರ ಗೋಧ್ರೋತ್ತರ ಘಟನೆಯ ನಂತರ ಕೇಂದ್ರದಲ್ಲಿದ್ದ ಎನ್ ಡಿಎ ಸರ್ಕಾರಕ್ಕೆ ಸಾಕಷ್ಟು ಇರಿಸು ಮುರಿಸುಂಟಾಗಿತ್ತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ನರೇಂದ್ರ ಮೊದಿ ಅವರ ಬಳಿ ರಾಜೀನಾಮೆ ಕೊಡಿಸಲು ನಿರ್ಧರಿಸಿದ್ದರು ಎಂದು ಸುಮಾರು ಒಂದೂ ಮುಕ್ಕಾಲು ದಶಕದ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

ಮೋದಿ ಸರ್ಕಾರದ ಬಗ್ಗೆ ವಾಜಪೇಯಿ ಅವರಿಗೆ ಸಾಕಷ್ಟು ಬೇಸರವಾಗಿತ್ತು. ಮುಜುಗರವುಂಟಾಗಿತ್ತು. ಆದ್ದರಿಂದ ಅವರು ಮೋದಿ ಅವರ ಬಳಿ ರಾಜೀನಾಮೆ ನೀಡುವಂತೆ ಕೇಳುವುದಕ್ಕೆ ಮುಂದಾಗಿದ್ದರು. ಅಕಸ್ಮಾತ್ ಮೋದಿ ರಾಜಿನಾಮೆ ನೀಡಲು ನಿರಾಕರಿಸಿದರೇ ಅವರನ್ನು ಅಮಾನತು ಮಾಡಬೇಕೆಂದು ನಿರ್ಧರಿಸಿದ್ದರು, 

ಅಂದು ಮೋದಿಯವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವುದು ಬೇಡ ಎಂದು ಆವರ ಬೆಂಬಲಕ್ಕೆ ನಿಂತಿದ್ದು ಆಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು. ಮೋದಿ ಅವರನ್ನು ಅಮಾನತು ಮಾಡಿದರೆ ನಾನು(ಅಡ್ವಾಣಿ) ರಾಜೀನಾಮೆ ಕೊಡುತ್ತೇನೆ ಎಂದು ಅಡ್ವಾಣಿ ಅವರು ವಾಜಪೇಯಿ ಅವರಿಗೆ ಹೆದರಿಸಿದ್ದರು ಎಂದು ಯಶವಂತ್ ಸಿನ್ಹಾ ಬಹಿರಂಗ ಪಡಿಸಿದ್ದಾರೆ. 

ಐಎನ್ ಎಸ್ ವಿರಾಟ್ ಅನ್ನು ರಾಜೀವ್ ಗಾಂಧಿ ಪರ್ಸನಲ್ ಟ್ಯಾಕ್ಸಿಯ ಹಾಗೆ ಬಳಸಿಕೊಂಡರು ಎಂಬ ಮಾತುಗಳು ಪ್ರಧಾನಿ ಹುದ್ದೆಗೆ ತಕ್ಕುದಲ್ಲ. ಆ ಹುದ್ದೆಯ ಘನತೆಯನ್ನು ಕಳೆಯುವ ಹಾಗೆ ಮಾತನಾಡಬಾರದು ಎಂದು ಸಿನ್ಹಾ ಮೋದಿಗೆ ಕಿವಿಮಾತು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com