ಸಿಜೆಐ ಲೈಂಗಿಕ ಕಿರುಕುಳ ಪ್ರಕರಣ: ಸುಪ್ರೀಂ ಮಾಜಿ ನ್ಯಾಯಮೂರ್ತಿಗಳಿಂದ ತನಿಖೆಗೆ ಅಟಾರ್ನಿ ಜನರಲ್ ಪತ್ರ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲುಸುಪ್ರೀಂ ಕೋರ್ಟ್ ಆಂತರಿಕ ಸಮಿತಿ ರಚನೆಯಾಗುವುದಕ್ಕೆ ಮುನ್ನವೇ ಮೂರು ಮಾಜಿ ಸುಪ್ರೀಂಕೋರ್ಟ್.....
ಕೆ.ಕೆ. ವೇಣುಗೋಪಾಲ್
ಕೆ.ಕೆ. ವೇಣುಗೋಪಾಲ್
ನವದೆಹಲಿ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲುಸುಪ್ರೀಂ ಕೋರ್ಟ್ ಆಂತರಿಕ ಸಮಿತಿ ರಚನೆಯಾಗುವುದಕ್ಕೆ ಮುನ್ನವೇ ಮೂರು ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ಸ್ಥಾಪಿಸಲು ಎಲ್ಲ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ತಾವು ಪತ್ರಬರೆದು ತಿಳಿಸಿದ್ದಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ.
ಸರ್ಕಾರದೊಡನೆ ಈ ಸಂಬಂಧ ಇರುವ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿರುವ ವೇಣುಗೋಪಾಲ್ "ನಾನು 'ಪತ್ರವನ್ನು ಬರೆದಿದ್ದೇನೆ ಎಂಬುದು ಹೊರತಾಗಿ ' ವೈರ್ 'ವರದಿಯು ಸಂಪೂರ್ಣ ಸುಳ್ಳಿನಿಂದ ಕೂಡಿದೆ" ಎಂದು ಪಿಟಿಐಗೆ ಹೇಳಿದ್ದಾರೆ.
ಸಿಜೆಐ ಗೊಗೋಯ್ ವಿರುದ್ಧ ಮಾಜಿ ಸುಪ್ರೀಂ ಕೋರ್ಟ್ ಮಹಿಳಾ ಉದ್ಯೋಗಿ ಮಾಡಿರುವ ಆರೋಪಗಳ ವಿಚಾರಣೆಗೆ ನ್ಯಾಯಮೂರ್ತಿ ಎಸ್. ಎ.ಬೋಬ್ಡೆ ನೇತೃತ್ವದ ಮೂರು ಸದಸ್ಯರ ಆಂತರಿಕ ಸಮಿತಿ ರಚನೆಯಾಗುವ ಮುನ್ನವೇ ಏಪ್ರಿಲ್  22 ರಂದು ಅವರು ಪತ್ರವನ್ನು ಬರೆದಿದ್ದಾಗಿ ವೇಣುಗೋಪಾಲ್ ಹೇಳಿದ್ದಾರೆ. "ಸುಪ್ರೀಂಕೋರ್ಟ್ನ ಮೂರು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಆಂತರಿಕ ತನಿಖಾ ಸಮಿತಿಯ ನೇಮಕಾತಿಗೆ ಮುಂಚಿತವಾಗಿ ನಾನು ಪತ್ರವೊಂದನ್ನು ಬರೆದಿದ್ದೇನೆ ಎಂದು ನಾನು ಒಪ್ಪಿಕೊಳ್ಳುತ್ತೇನೆ" 
ಸುಪ್ರೀಂ ಕೋರ್ಟ್ ಮಾಜಿ ಮಹಿಳಾ ಉದ್ಯೋಗಿ ಅವರಿಂದ ಕೇಳಿಬಂದ ಆರೋಪದ ತನಿಖೆ ನಡೆಸಿದ್ದ ಆಂತರಿಕ ಸಮಿತಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ 'ಯಾವುದೇ ಸತ್ಯಾಂಶಗಳು ಪತ್ತೆಯಾಗಿಲ್ಲ' ಎಂದು ಮೇ 6 ರಂದು ಸಿಜೆಇ ರಂಜನ್ ಗೊಗೋಯ್ ಗೆ ಕ್ಲೀನ್ ಚಿಟ್ ನೀಡಿದೆ.
ಏ. 23ರಂದು ರಚನೆಯಾಗಿದ್ದ ಮೂವರು ಸದಸ್ಯರ ಆಂತರಿಕ ತನಿಖಾ ಸಮಿತಿ  ತನ್ನ ಕಾರ್ಯವನ್ನು 14 ದಿನಗಳಲ್ಲಿ ಪೂರ್ಣಗೊಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com