ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಮೇಲೆ ಹೋಗಿದ್ದಕ್ಕೆ ಗುಜರಾತ್ ನ ಗ್ರಾಮದ ದಲಿತರಿಗೆ ಬಹಿಷ್ಕಾರ!

ಮದುವೆ ಮೆರವಣಿಗೆಯಲ್ಲಿ ದಲಿತ ಮದುಮಗ ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ...

Published: 11th May 2019 12:00 PM  |   Last Updated: 11th May 2019 01:57 AM   |  A+A-


Image used for representational purpose only

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಅಹ್ಮದಾಬಾದ್: ಮದುವೆ ಮೆರವಣಿಗೆಯಲ್ಲಿ ದಲಿತ ಮದುಮಗ ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ಸಮುದಾಯದವರಿಗೆ ಮೇಲ್ಜಾತಿಯವರು ಗ್ರಾಮದಿಂದ ಬಹಿಷ್ಕಾರ ಹಾಕಿದ ಘಟನೆ ಗುಜರಾತ್ ನ ಗ್ರಾಮವೊಂದರಲ್ಲಿ ನಡೆದಿದೆ.

ಗುಜರಾತ್ ರಾಜ್ಯದ ಮೆಹ್ಸಾನಾ ಜಿಲ್ಲೆಯ ಲಾರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇದು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ತವರು ಜಿಲ್ಲೆಯಾಗಿದೆ. ತಮ್ಮನ್ನು ಬಹಿಷ್ಕಾರ ಹಾಕಿರುವುದರಿಂದ ಹಾಲು ಸೇರಿದಂತೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳು ಸಿಗುತ್ತಿಲ್ಲ, ನಾವು ಹೋಗಿ ಕೇಳಿದರೆ ಕೊಡಲು ನಿರಾಕರಿಸುತ್ತಾರೆ. ಆಟೋರಿಕ್ಷಾ ಚಾಲಕರು ಕೂಡ ಮೇಲ್ಜಾತಿಯವರ ಭಯದಿಂದ ನಮ್ಮನ್ನು ವಾಹನಕ್ಕೆ ಹತ್ತಲು ಬಿಡುವುದಿಲ್ಲ ಎಂದು ಗ್ರಾಮದ ದಲಿತರು ಹೇಳುತ್ತಾರೆ.

ಕಳೆದ ಮಂಗಳವಾರ ದಲಿತ ಯುವಕನ ಮದುವೆ ನಡೆದಿದ್ದು ಅದರಲ್ಲಿ ಮೆರವಣಿಗೆ ವೇಳೆ ಕುದುರೆ ಸವಾರಿ ಮಾಡಿದ್ದನು. ಇದನ್ನು ಕಂಡ ಮೇಲ್ಜಾತಿಯವರು ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಷಯ ತಿಳಿದ ಪೊಲೀಸರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಆದೇಶ ನೀಡಿದ್ದ ಗ್ರಾಮದ ಮುಖಂಡ ವಿನುಜಿ ಠಾಕೋರ್ ಸೇರಿದಂತೆ ಇನ್ನೂ ಕೆಲವರನ್ನು ಬಂಧಿಸಿದ್ದಾರೆ.

ಈ ಪ್ರಕರಣ ನನ್ನ ಗಮನಕ್ಕೆ ಗುರುವಾರ ರಾತ್ರಿ ಬಂದಿದ್ದು ಮರುದಿನವೇ ಗ್ರಾಮಕ್ಕೆ ಹೋಗಿ ವಿಷಯ ತಿಳಿದುಕೊಂಡೆ ಎನ್ನುತ್ತಾರೆ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp