ಎಎಚ್-64ಇ(1) ಅಪಚೆ ದಾಳಿ ಹೆಲಿಕಾಪ್ಟರ್; ಏನಿದರ ವಿಶೇಷತೆ?

2015ರಲ್ಲಿ ಭಾರತ ಮತ್ತು ಅಮೆರಿಕಾ ಸರ್ಕಾರ ಮಾಡಿಕೊಂಡ ಹೆಲಿಕಾಪ್ಟರ್ ...
ಎಎಚ್-64ಇ(1) ಅಪಚೆ ದಾಳಿ ಹೆಲಿಕಾಪ್ಟರ್
ಎಎಚ್-64ಇ(1) ಅಪಚೆ ದಾಳಿ ಹೆಲಿಕಾಪ್ಟರ್
ನವದೆಹಲಿ: 2015ರಲ್ಲಿ ಭಾರತ ಮತ್ತು ಅಮೆರಿಕಾ ಸರ್ಕಾರ ಮಾಡಿಕೊಂಡ ಹೆಲಿಕಾಪ್ಟರ್ ಖರೀದಿ ಒಪ್ಪಂದದ ಪ್ರಕಾರ ಈ ವರ್ಷ ಜುಲೈಯಲ್ಲಿ ಎಎಚ್-64ಇ(1) ಅಪಚೆ ದಾಳಿ ಹೆಲಿಕಾಪ್ಟರ್ ಭಾರತಕ್ಕೆ ಆಗಮಿಸಲಿದೆ.
ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆಯ ಭವಿಷ್ಯದ ಅವಶ್ಯಕತೆಗಳಿಗೆ ಸರಿಹೊಂದುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ಪರ್ವತಮಯ ಭೂಪ್ರದೇಶದಲ್ಲಿ ಗಮನಾರ್ಹವಾದ ಸಾಮರ್ಥ್ಯವನ್ನು ಈ ಯುದ್ಧ ಹೆಲಿಕಾಪ್ಟರ್ ಹೊಂದಿರುತ್ತದೆ.
ಹೆಲಿಕಾಪ್ಟರ್ ತನ್ನ ವ್ಯಾಪ್ತಿಯಲ್ಲಿ ನಿಖರ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯ ಯುದ್ಧ ಹೆಲಿಕಾಪ್ಟರ್ ಆಗಿದೆ. ಕಾರ್ಯದಕ್ಷತೆಯಲ್ಲಿ ಮುಂದಿದೆ. ಉದ್ದದ ಶ್ರೇಣಿಯ ಶಸ್ತ್ರಾಸ್ತ್ರಗಳ ನಿಖರತೆ, ಎಲ್ಲಾ ಹವಾಮಾನಗಳಲ್ಲಿ ಹೋರಾಟ ನಡೆಸುವ ಶಕ್ತಿ  ಮತ್ತು ವಸ್ತುಗಳ ಪತ್ತೆಯಲ್ಲಿ ಮುಂದಿದೆ. ಸಂಯೋಜಿತ ಸಂವೇದಕಗಳು, ಜಾಲ, ಮತ್ತು ಸಾಂದರ್ಭಿಕ ಜಾಗೃತಿ ಡಿಜಿಟಲ್ ಸಂವಹನ, ನೈಜ ಸಮಯದಲ್ಲಿ ಯುದ್ಧ ರಂಗದಲ್ಲಿ ನಿರ್ವಹಣೆ, ಮತ್ತು ಜಂಟಿ ಕಾರ್ಯಾಚರಣೆ 'ಯುದ್ಧಭೂಮಿಯಲ್ಲಿ ಕಮಾಂಡರ್ ಗಳಿಗೆ ಚಿತ್ರಗಳನ್ನು ಕಳುಹಿಸುವ ಮತ್ತು ಗುರಿ ಸ್ಥಾನಗಳ ಡಿಜಿಟಲ್ ಸಂವಹನ ಮೊದಲಾದ ಸೌಲಭ್ಯಗಳು ಇದರಲ್ಲಿವೆ.
ಯುದ್ಧಭೂಮಿಯ ಚಿತ್ರಣವನ್ನು ಸ್ವೀಕರಿಸಿ ಅದನ್ನು ವರ್ಗಾಯಿಸುವ ತಂತ್ರಜ್ಞಾನ ಈ ಹೆಲಿಕಾಪ್ಟರ್ ನಲ್ಲಿ ಇರಲಿದೆ. ಭೂಸೇನಾ ಪಡೆಗೆ ಯುದ್ಧದಲ್ಲಿ ಯಾವುದೇ ಸಂದರ್ಭದಲ್ಲಿಯಾದರೂ ಜಂಟಿ ಕಾರ್ಯಾಚರಣೆಗೆ ಹೆಲಿಕಾಪ್ಟರ್ ನೆರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com