'ಮೋಡ ಕವಿದ ವಾತಾವರಣ ಹಾಗೂ ರಡಾರ್': ಹಾಸ್ಯಕ್ಕೆ ಗುರಿಯಾಯ್ತು ಮೋದಿ ಹೇಳಿಕೆ?!

ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಬಿಚ್ಚಿಟ್ಟ ಅಂಶವೊಂದು ಹಾಸ್ಯಕ್ಕೆ ಗುರಿಯಾಗಿದೆ.
'ಮೋಡ ಕವಿದ ವಾತಾವರಣ ಹಾಗೂ ರಡಾರ್': ಹಾಸ್ಯಕ್ಕೆ ಗುರಿಯಾಯ್ತು ಮೋದಿ ಹೇಳಿಕೆ?!
'ಮೋಡ ಕವಿದ ವಾತಾವರಣ ಹಾಗೂ ರಡಾರ್': ಹಾಸ್ಯಕ್ಕೆ ಗುರಿಯಾಯ್ತು ಮೋದಿ ಹೇಳಿಕೆ?!
ನವದೆಹಲಿ: ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಬಿಚ್ಚಿಟ್ಟ ಅಂಶವೊಂದು ಹಾಸ್ಯಕ್ಕೆ ಗುರಿಯಾಗಿದೆ. 
ಮೇ.11 ರಂದು ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಇಷ್ಟು ದಿನ ರಹಸ್ಯವಾಗಿದ್ದ ಮಾಹಿತಿಯೊಂದನ್ನು ಬಹಿರಂಗಪಡಿಸಿದರು. ಅದೇನೆಂದರೆ " ವೈಮಾನಿಕ ದಾಳಿ ನಡೆದ ರಾತ್ರಿ ಹೆಚ್ಚು ಮಳೆಯಾಗಿತ್ತು. ನಮ್ಮ ರೇಡಾರ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದಾಳಿಗೆ ವಾತಾವರಣ ಸಹಕಾರಿಯಾಗಿರಲಿಲ್ಲ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ದಾಳಿಯ ದಿನಾಂಕ ಬದಲಿಸೋಣ ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದರು. 
ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಸೋರಿಕೆ ಆಗುವ ಸಾಧ್ಯತೆ ಇದೆ ಎಂಬ ಸಂಶಯ ಕಾಡಿತ್ತು. ಮೋಡ ಕವಿದಿದ್ದರಿಂದ ರಡಾರ್  ವಿಷಯದಲ್ಲಿ  ಅನಾನುಕೂಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗೆಯೇ ಶತ್ರುಗಳ ರಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ಮೋಡಗಳಿಂದಾಗಿ ನಾವು ರಡಾರ್ ನಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಆಲೋಚನೆ ಬಂದಿತ್ತು. ಅಧಿಕಾರಿಗಳು ಗೊಂದಲದಲ್ಲಿದ್ದಾಗ ದಾಳಿ ನಡೆಸಲು ಮುನ್ನಡೆಯಿರಿ  ಎಂದು ಅದೇಶಿಸಿದ್ದೆ" ಎಂಬುದನ್ನು ಮೋದಿ ಬಹಿರಂಗಪಡಿಸಿದ್ದರು. 
ಮೋದಿ ಅವರ ರಡಾರ್- ಮೋಡ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದ್ದು, ತಾಂತ್ರಿಕ ದೃಷ್ಟಿಕೋನದಿಂದ ಮೋದಿ ಹೇಳಿದ್ದು ಸಾಧ್ಯವೇ ಇಲ್ಲವೇ ಎಂಬ ಚರ್ಚೆಗಳು ನಡೆಯುತ್ತಿವೆ. 
ಇದೇ ವೇಳೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೋದಿ ಹೇಳಿಕೆಯನ್ನು ಹಾಸ್ಯ ಮಾಡಿವೆ. ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಮೋದಿ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ರಡಾರ್ ಗಳು ಮೋಡಗಳನ್ನು ದಾಟುವುದಿಲ್ಲ, ಮುಂದಿನ ಏರ್ ಸ್ಟ್ರೈಕ್ ಮಾಡುವಾಗ ಈ ಅಂಶ ಪ್ರಾಮುಖ್ಯ ಪಡೆಯಲಿದೆ ಎಂದು ಹೇಳಿದ್ದಾರೆ.
ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯೂ ಮೋದಿ ಹೇಳಿಕೆಯನ್ನು ಟೀಕಿಸಿದ್ದು, ಮೋದಿ ಈ ಹೇಳಿಕೆ ನೀಡುವ ಮೂಲಕ ಭಾರತೀಯ ವಾಯುಪಡೆಯನ್ನು ಅಜ್ಞಾನ ಮತ್ತು ವೃತ್ತಿಪರರಲ್ಲದವರೆಂದು ಹೇಳಿ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com