ಪ್ರತಿಕೂಲ ಹವಾಮಾನದಿಂದ ಬಾಂಬ್ ಸೆನ್ಸಾರ್ ಗಳ ಮೇಲೆ ಪರಿಣಾಮವಾಗುತ್ತಿತ್ತು: ಬಾಲಾಕೋಟ್ ದಾಳಿ ಬಗ್ಗೆ ವಾಯುಪಡೆ ಹೇಳಿಕೆ

ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ...
ಮೀರಜ್ 200 ಯುದ್ಧ ವಿಮಾನ
ಮೀರಜ್ 200 ಯುದ್ಧ ವಿಮಾನ
ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟಿವಿ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಇದೀಗ  ಹಾಸ್ಯಾಸ್ಪದ ಚರ್ಚೆಯನ್ನು ಹುಟ್ಟುಹಾಕಿದೆ.
ಮೇ.11 ರಂದು ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಇಷ್ಟು ದಿನ ರಹಸ್ಯವಾಗಿದ್ದ ಮಾಹಿತಿಯೊಂದನ್ನು ಬಹಿರಂಗಪಡಿಸಿದರು. ಅದೇನೆಂದರೆ " ವೈಮಾನಿಕ ದಾಳಿ ನಡೆದ ರಾತ್ರಿ ಹೆಚ್ಚು ಮಳೆಯಾಗಿತ್ತು. ನಮ್ಮ ರೇಡಾರ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದಾಳಿಗೆ ವಾತಾವರಣ ಸಹಕಾರಿಯಾಗಿರಲಿಲ್ಲ. ಹಾಗಾಗಿ ವಾಯುದಾಳಿಯ ಬದಲಿಸೋಣ ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದರು. 
ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಸೋರಿಕೆ ಆಗುವ ಸಾಧ್ಯತೆ ಇದೆ ಎಂಬ ಸಂಶಯ ಕಾಡಿತ್ತು. ಮೋಡ ಕವಿದಿದ್ದರಿಂದ ರಡಾರ್  ವಿಷಯದಲ್ಲಿ  ಅನಾನುಕೂಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗೆಯೇ ಶತ್ರುಗಳ ರಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ಮೋಡಗಳಿಂದಾಗಿ ನಾವು ರಡಾರ್ ನಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಆಲೋಚನೆ ಬಂದಿತ್ತು. ಅಧಿಕಾರಿಗಳು ಗೊಂದಲದಲ್ಲಿದ್ದಾಗ ದಾಳಿ ನಡೆಸಲು ಮುನ್ನಡೆಯಿರಿ  ಎಂದು ಅದೇಶಿಸಿದ್ದೆ" ಎಂಬುದನ್ನು ಮೋದಿ ಬಹಿರಂಗಪಡಿಸಿದ್ದರು.
ರಾಜಕೀಯ ವಿರೋಧ ಪಕ್ಷಗಳು ಇದನ್ನು ಹಾಸ್ಯಾಸ್ಪದವಾದಿ ಕಂಡರೆ, ಭಾರತೀಯ ವಾಯುಪಡೆ ಅಧಿಕಾರಿಗಳು ಪ್ರತಿಕೂಲ ಹವಾಮಾನದ ನಡುವೆ ವಾಯುದಾಳಿ ನಡೆಸುವುದರಿಂದ ಅಂತಿಮ ಫಲಿತಾಂಶದ ಮೇಲೆ ಉಂಟಾಗುತ್ತಿದ್ದ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಹೆಸರು ಹೇಳಲಿಚ್ಛಿಸದ ವಾಯುಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೀರಜ್ ಯುದ್ಧ ವಿಮಾನ ನಿಗದಿತ ಗುರಿಯನ್ನು ತಲುಪುವುದು ಸಮಸ್ಯೆಯಾಗಿರಲಿಲ್ಲ, ಸ್ಪ್ಟೈಸ್ -2000 ಸ್ಟಾಂಡ್ ಆಫ್ ಗ್ಲೈಡ್ ಬಾಂಬ್ ನ ಪೆನೆಟ್ರೇಟರ್ ಬಿಡುಗಡೆಯಾದರೆ ಅದರ ಪರಿಣಾಮದ ಬಗ್ಗೆ ಆತಂಕವಿದ್ದಿತ್ತು. ನಿಗದಿತ ಸ್ಥಳಕ್ಕೆ ಬಾಂಬ್ ಹಾಕುವುದಕ್ಕೆ ಮತ್ತು ಬಾಂಬ್ ಸೆನ್ಸರ್ ಮಧ್ಯೆ ಏನೇ ಹೊಂದಾಣಿಕೆ ಕೊರತೆಯಾದರೆ ಮುಂದೆ ಬಹುದೊಡ್ಡ ತೊಂದರೆಯಾಗಲಿದೆ ಎಂಬ ಆತಂಕವುಂಟಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.
6 ಮೀರಜ್ ವಿಮಾನಗಳಲ್ಲಿ ಒಂದು ವಿಮಾನ ಕೂಡ ಪ್ರತಿಕೂಲ ಹವಾಮಾನದಿಂದ ಬಾಂಬ್ ಬಿಡುಗಡೆ ಮಾಡಲು ಸಾಧ್ಯವಾಗಿರದಿದ್ದರೆ 2016ರಲ್ಲಿ ಭಾರತೀಯ ವಾಯುಪಡೆಯ ಐರನ್ ಫಸ್ಟ್ ದಾಳಿಯಂತಾಗುತ್ತಿತ್ತು. ಆಗ ಹಗುರ ಯುದ್ಧ ವಿಮಾನ ಹಾರಿಸಿದ್ದ ಕ್ಷಿಪಣಿ ಪ್ರತಿಕೂಲ ಹವಾಮಾನದಿಂದಾಗಿ ನಿಗದಿತ ಗುರಿಯನ್ನು ಹೊಡೆದಿರಲಿಲ್ಲ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com