ಮುಂಬೈ: ಎಟಿಎಂನಲ್ಲಿ ಮರ್ಮಾಂಗ ತೋರಿಸಿದ ಕಾಮುಕ, ವಿಡಿಯೋ ವೈರಲ್ ಮಾಡಿದ ಮಹಿಳೆ

ವ್ಯಕ್ತಿಯೊಬ್ಬ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದು, ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

Published: 13th May 2019 12:00 PM  |   Last Updated: 13th May 2019 06:41 AM   |  A+A-


Mumbai man flashes inside ATM, woman posts video on social media

ಸಂದೀಪ್ ಕುಂಭಕರ್ಣ

Posted By : LSB LSB
Source : The New Indian Express
ಮುಂಬೈ: ವ್ಯಕ್ತಿಯೊಬ್ಬ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದು, ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಮಹಿಳೆ ಧೈರ್ಯ ಕಳೆದುಕೊಳ್ಳದೆ ಮರ್ಮಾಂಗ ತೋರಿಸುತ್ತಿದ್ದ ವ್ಯಕ್ತಿಯ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಥಾಣೆಯ ಕೊಪಾರಿ ಪ್ರದೇಶದಲ್ಲಿ 23 ವರ್ಷದ ಮಹಿಳೆ ಭಾನುವಾರ ಎಟಿಎಂಗೆ ಹಣ ತೆಗೆಯಲು ಹೋಗಿದ್ದಾಳೆ. ಮಹಿಳೆ ಹಿಂಬಾಲಿಸಿ ಎಟಿಎಂಗೆ ಬಂದ ವ್ಯಕ್ತಿ ಲೈಂಗಿಕ ಕಿರುಕುಳ ನೀಡುವ ಯತ್ನ ಮಾಡಿದ್ದಾನೆ. ಆತನ ವಿಡಿಯೋ ಮಾಡಿದ ಮಹಿಳೆ ಧೈರ್ಯವಾಗಿ ಪರಿಸ್ಥಿತಿ ಎದುರಿಸಿದ್ದಾಳೆ. ಆಕೆ ಧೈರ್ಯ ನೋಡಿ ವ್ಯಕ್ತಿ ಓಡಿ ಹೋಗಿದ್ದಾನೆ.

ಮಹಿಳೆ ಘಟನೆಯ ವಿಡಿಯೋವನ್ನು ಟ್ವೀಟರ್ ಗೆ ಹಾಕಿ, ಪೊಲೀಸರಿಗೆ ದೂರು ನೀಡಿದ್ದಾಳೆ. ವಿಡಿಯೋ ನೋಡಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ.

ಬಂಧಿತ ಆರೋಪಿ ಕೋಪ್ರಿ ನಿವಾಸಿ ಸಂದೀಪ್ ಕುಂಭಕರ್ಣ(38) ಎಂದು ಗುರುತಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp