ಇದೆಂತಾ ಘೋರ! ತಂದೆಯಿಂದಲೇ ಮಗಳ ಮಾರಾಟ, ಖರೀದಿಸಿದವರಿಂದ ಗ್ಯಾಂಗ್ ರೇಪ್

ಹಣದಾಸೆಗಾಗಿ ತನ್ನ ಮಗಳನ್ನೇ ಮಾರಾಟ ಮಾಡಿದ್ದ ತಂದೆ, ಆಕೆಯನ್ನು ಖರೀದಿಸಿದವರಿಂದಲೇ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ, ಪೋಲೀಸರು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ....

Published: 13th May 2019 12:00 PM  |   Last Updated: 13th May 2019 04:22 AM   |  A+A-


UP Woman

ಸಂಗ್ರಹ ಚಿತ್ರ

Posted By : RHN RHN
Source : Online Desk
ಲಖನೌ: ಹಣದಾಸೆಗಾಗಿ ತನ್ನ ಮಗಳನ್ನೇ ಮಾರಾಟ ಮಾಡಿದ್ದ ತಂದೆ, ಆಕೆಯನ್ನು ಖರೀದಿಸಿದವರಿಂದಲೇ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ, ಪೋಲೀಸರು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ! ಇದು ಉತ್ತರ ಪ್ರದೇಶ ಮೀರತ್ ವಿಧವೆ ಮಹಿಳೆಯೊಬ್ಬಳ ಘೋರ ದುರಂತ ಕಥೆ

20 ವರ್ಷದ ವಿಧವೆ ಮಗಳನ್ನು ಆಕೆಯ ತಂದೆ ಕೇವಲ 10 ಸಾವಿರ ರು. ಗೆ ಮಾರಾಟ ಮಾಡಿದ್ದ. ಆದರೆ ಹಾಗೆ ಮಹಿಳೆಯನ್ನು ಖರೀದಿಸಿದ ವ್ಯಕ್ತಿ ಹಾಗೂ ಆತನ ಸ್ನೇಹಿತರು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆ ನಂತರ ಆಕೆ ದೂರು ನೀಡಲು ಪೋಲೀಸರ ಬಳಿ ಧಾವಿಸಿದಾಗಲೂ ಆಕೆಗೆ ನ್ಯಾಯ ಸಿಕ್ಕಲಿಲ್ಲ. ಪೋಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಇದರಿಂದ ಮನನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸಧ್ಯ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಆಕೆಯ ದೇಹದ ಶೇ. 80ರಷ್ಟು ಭಾಗ ಸುಟ್ಟು ಹೋಗಿದೆ.

ಘಟನೆ ವಿವರ

ಮೂಲತಃ ಉತ್ತರಪ್ರದೇಶದ ಹಾಪೂರ್ ನವರಾಗಿದ್ದ ಮಹಿಳೆಯನ್ನು ಪತಿಯ ಮರಣದ ಬಳಿಕ ಆಕೆಯ ತಂದೆ ಮಾರಾಟ ಮಾಡಿದ್ದ. ಮಹಿಳೆಯನ್ನು ಖರೀದಿಸಿದ್ದ ವ್ಯಕ್ತಿ ಹಲವು ಜನರಿಂದ ಸಾಲ ಪಡೆದುಕೊಂಡಿದ್ದು ಆಕೆಯನ್ನು ಸಾಲದಾತರ ಮನೆಗೆ ಕೆಲಸಕ್ಕೆ ಕಳಿಸುತ್ತಿದ್ದ. ಅಲ್ಲಿ ಸಹ ಆಕಗೆ ನಿರಂತರ ದೌರ್ಜನ್ಯ ಅನುಭವಿಸುತ್ತಿದ್ದಳು.

ಇದೀಗ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಪ್ರಕರಣ ಕುರಿತಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದುಮಹಿಳೆಗೆ ನ್ಯಾಯ ಒದಗಿಸಬೇಕು, ಅಪರಾಧಿಗಳಿಗೆ ಕಠಿಣ ಸಜೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp