ರಾತ್ರೋರಾತ್ರಿ ಫೇಮಸ್ ಆದ ಮತಗಟ್ಟೆ ಅಧಿಕಾರಿ ಮತ್ತು ಮುಂಬೈ ಇಂಡಿಯನ್ಸ್ ಅಭಿಮಾನಿ, ಫೋಟೋ ವೈರಲ್!

ಸಾಮಾಜಿಕ ಜಾಲತಾಣದ ಪ್ರಭಾವಳಿಯಿಂದ ಕೆಲ ಆಕರ್ಷಕ ಯುವತಿಯರು ರಾತ್ರೋರಾತ್ರಿ ಫೇಮಸ್ ಆಗುತ್ತಿದ್ದಾರೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ. ಮತಗಟ್ಟೆ ಮಹಿಳಾ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಾಮಾಜಿಕ ಜಾಲತಾಣದ ಪ್ರಭಾವಳಿಯಿಂದ ಕೆಲ ಆಕರ್ಷಕ ಯುವತಿಯರು ರಾತ್ರೋರಾತ್ರಿ ಫೇಮಸ್ ಆಗುತ್ತಿದ್ದಾರೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ. ಮತಗಟ್ಟೆ ಮಹಿಳಾ ಅಧಿಕಾರಿ ಹಾಗೂ ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಮಹಿಳಾ ಅಭಿಮಾನಿಯೊಬ್ಬರ ಫೋಟೋ ವೈರಲ್ ಆಗಿದೆ.
ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದ ಯುವತಿಯನ್ನು ಕ್ಯಾಮೆರಾ ಮ್ಯಾನ್ ಸೆರೆಹಿಡಿದಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದೇ ವೇಳೆ, ಭಾನುವಾರ ನಡೆದ 6ನೇ ಹಂತದ ಮತದಾನದ ವೇಳೆ ಮತಗಟ್ಟೆಯ ಮಹಿಳಾ ಅಧಿಕಾರಿಯೊಬ್ಬರು ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು ಈ ಫೋಟೋ ಸಹ ಇದೀಗ ನೆಟಿಗರ ಮನಸ್ಸು ಕದ್ದಿದೆ. ಇನ್ನು ಈ ಮಹಿಳಾ ಅಧಿಕಾರಿ ಹೆಸರೇನು? ಹಾಗೂ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿಲ್ಲ. ಇನ್ನು ಈಕೆ ಕೆಲಸ ಮಾಡಿದ ಬೂತ್ ನಲ್ಲಿ ಶೇಕಡ 100ರಷ್ಟು ಮತದಾನವಾಗಿದೆ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. 
ಇತ್ತೀಚೆಗಷ್ಟೇ ನಡೆದ ಐದನೇ ಹಂತದ ಮತದಾನದ ವೇಳೆ ರಾಜಸ್ತಾನದ ಜೈಪುರದ ಕುಮಾವತ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿ ಹೆಸರು ನಳಿನಿ ಸಿಂಗ್ ಅವರು ಹಳದಿ ಸೀರೆಯುಟ್ಟು ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಈಕೆಯ ಫೋಟೋ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com