ಅತ್ತೆ ಕಾಟ ತಾಳಲಾರದೆ ಬೆತ್ತಲಾಗಿ ಪೋಲೀಸ್ ಠಾಣೆಗೆ ಬಂದ ಮಹಿಳೆ!

ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಅತ್ತೆ ಹಾಗೂ ಸಂಬಂಧಿಗಳಿಂದ ಕಿರುಕುಳಕ್ಕೊಳಗಾಗಿದ್ದ ಮಹಿಳೆಯೊಬ್ಬಳು ಬೆತ್ತಲೆಯಾಗಿ ಪೋಲೀಸ್ ಠಾಣೆಗೆ ಆಗಮಿಸಿ ತನ್ನ ಪರಿಸ್ಥಿತಿಯನ್ನು ವರದಿ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Published: 13th May 2019 12:00 PM  |   Last Updated: 13th May 2019 06:25 AM   |  A+A-


Woman walks naked to police station after in-laws strip, thrash her

ಅತ್ತೆ ಕಾಟ ತಾಳಲಾರದೆ ಬೆತ್ತಲಾಗಿ ಪೋಲೀಸ್ ಠಾಣೆಗೆ ಬಂದ ಮಹಿಳೆ!

Posted By : RHN RHN
Source : The New Indian Express
ಚುರು(ರಾಜಸ್ಥಾನ): ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಅತ್ತೆ ಹಾಗೂ ಸಂಬಂಧಿಗಳಿಂದ ಕಿರುಕುಳಕ್ಕೊಳಗಾಗಿದ್ದ ಮಹಿಳೆಯೊಬ್ಬಳು ಬೆತ್ತಲೆಯಾಗಿ ಪೋಲೀಸ್ ಠಾಣೆಗೆ ಆಗಮಿಸಿ ತನ್ನ ಪರಿಸ್ಥಿತಿಯನ್ನು ವರದಿ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಈ ವೇಳೆ ಕಿರುಕುಳಕ್ಕೀಡಾದ ಮಹಿಳೆಗೆ ಸಹಾಯ ಮಾಡುವ ಬದಲಿಗೆ ಸಾರ್ವಜನಿಕರು ಆಕೆಯ ಬೆತ್ತಲೆ ಚಿತ್ರವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಆನಂದಿಸುತ್ತಿದ್ದರೆಂದು ಪೋಲೀಸರು ಹೇಳೀದ್ದಾರೆ.

ಭಾನುವಾರ ರಾಜಸ್ಥಾನ ಚುರು ಜಿಲ್ಲೆ ಬಿದಸರ್ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಮಹಿಳೆಯ ಅತ್ತೆ ಹಾಗೂ ನಾದಿನಿ ಆಕೆಗೆ ತಾಳಲಾರದಷ್ಟು ಕಿರುಕುಳ ನಿಡಿದ್ದಾರೆ. ಮೂಲತಃ ಮಹಾರಾಷ್ಟ್ರದ ಅಕೋದವರಾದ ಮಹಿಳೆ ಮದುವೆ ಬಳಿಕ ಚರುವಿನ ತನ್ನ ಪತಿಯ ಮನೆಯಲ್ಲಿ ವಾಸವಿದ್ದರು. ಆಕೆಯ ಪತಿ ಅಸ್ಸಾಂನಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಮನೆಯಲ್ಲಿ ಗಂಡನಿಲ್ಲದ ವೇಳೆ ಅತ್ತೆ ಹಾಗೂ ಅತ್ತಿಗೆ ಈ ಮಹಿಳೆಗೆ ಸಾಕಷ್ಟು ತೊಂದರೆ ನಿಡಿದ್ದಾರೆ. ಭಾನುವಾರ ಸಹ ಆಕೆಯೊಡನೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದು ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅತ್ತೆ, ಅತ್ತಿಗೆ ಇಬ್ಬರೂ ಸೇರಿ ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದಿದ್ದಾರೆ.

ಇದರಿಂದ ಮನನೊಂದ ಮಹಿಳೆ ಬಟ್ಟೆಯನ್ನೂ ಧರಿಸಿಕೊಳ್ಲದೆ ಬೆತ್ತಲೆಯಾಗಿಯೇ ಪೋಲೀಸ್ ಠಾಣೆಗೆ ಹೋಗಿ ದೂರಿತ್ತಿದ್ದಾಳೆ.

ಇದೀಗ ಸಂತ್ರಸ್ಥ ಮಹಿಳೆಯ ದೂರಿನ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೋಲೀಸರು ಮಹಿಳೆಯ ವೀಡಿಯೋ ಚಿತ್ರ ತೆಗೆದುಕೊಳ್ಳುತ್ತಿದ್ದವರ ಮೇಲೆ ಸಹ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದಲ್ಲದೆ ಒಟ್ಟಾರೆ ಪ್ರಕರಣವನ್ನು ಮಾನವ ಕಳ್ಳಸಾಗಾಣಿಕೆ ಹಿನ್ನೆಲೆಯಿಂಡಲೂ ತನಿಖೆ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp