ಎಲ್ ಟಿಟಿಇ ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಣೆ

ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್ ಟಿಟಿ ಇ) ಸಂಘಟನೆಯ ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್ ಟಿಟಿ ಇ) ಸಂಘಟನೆಯ ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. 
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ, 1967ರ ನಿಬಂಧನೆಗಳ ಅನ್ವಯ ಕೇಂದ್ರ ಸರ್ಕಾರ ನಿಷೇಧಿತ ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ - ಎಲ್ ಟಿಟಿಇ ಯನ್ನು ಕಾನೂನು ಬಾಹಿರ ಸಂಘಟನೆ ಎಂದು ನಿಷೇಧಿಸಿದೆ.
ಕೇಂದ್ರ ಸರ್ಕಾರ ಈ ಮೊದಲೇ ಎಲ್ ಟಿಟಿಇ ಮೇಲೆ ನಿಷೇಧ ವಿಧಿಸಿತ್ತು. ಈ ನಿಷೇಧ ಇಂದಿನಿಂದ ಮುಂದಿನ 5 ವರ್ಷಗಳವರೆಗೆ  ಅದನ್ನು ವಿಸ್ತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
1991ರಲ್ಲಿ ಮಾಜಿ ಪ್ರಧಾನಿ ರಾಹುಲ್ ಗಾಂಧಿ ಅವರ ಹತ್ಯೆ ನಡೆದ ಕೂಡಲೇ ಭಾರತ ಸರ್ಕಾರ ಎಲ್ ಟಿ ಟಿ ಇ ಯನ್ನು ನಿಷೇಧಿಸಿತ್ತು
ಎಲ್ ಟಿಟಿಇ ಕಾನೂನು ಬಾಹಿರ ಸಂಘಟನೆಯಾಗಿರುವ ಕಾರಣ, ಸಾಧ್ಯವಾದ ಎಲ್ಲ ರೀತಿಯಲ್ಲೂ ಸಂಘಟನೆಯ ಪ್ರತ್ಯೇಕತವಾದಿ ಚಟುವಟಿಕೆಗಳನ್ನು ಎಲ್ಲ ರೀತಿಯಲ್ಲೂ ನಿಯಂತ್ರಿಸುವ ಅಗತ್ಯವಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com