1988ರಲ್ಲಿ ಡಿಜಿಟಲ್ ಕ್ಯಾಮರಾ, ಇಮೇಲ್ ಹೊಂದಿದ್ದೆ ಎಂಬ ಮೋದಿಯವರ ಮಾತನ್ನು ನಂಬಲು ಸಾಧ್ಯವೇ?: ಒವೈಸಿ

ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬಲು ಸಾಧ್ಯವಿಲ್ಲ ಎಂದು ಎಐಎಂಐಎಂ...
ಅಸದುದ್ದೀನ್ ಒವೈಸಿ
ಅಸದುದ್ದೀನ್ ಒವೈಸಿ
ಹೈದರಾಬಾದ್: ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬಲು ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ತಾವು 1988ರಲ್ಲಿ ಡಿಜಿಟಲ್ ಕ್ಯಾಮರಾವನ್ನು ಬಳಸಿದ್ದೆ ಎಂದು ಪ್ರಧಾನಿ ಮೋದಿಯವರು ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಒವೈಸಿ, ಪ್ರಧಾನಿ ಮೋದಿಯವರ ಬಳಿ ಹಣವಿಲ್ಲವೆಂದು ಅವರು ಪರ್ಸ್ ಹೊಂದಿರಲಿಲ್ಲವಂತೆ. ಹಾಗಾದರೆ 1988ರಲ್ಲಿ ಅವರು ಡಿಜಿಟಲ್ ಕ್ಯಾಮರಾ ಹೊಂದಿದ್ದರು, ಇಮೇಲ್ ವಿಳಾಸ ಇಟ್ಟುಕೊಂಡಿದ್ದರು ಎಂಬುದು ನಂಬುವ ಮಾತೇ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ ಈ ಎಲ್ಲಾ ಮಾತುಗಳು ಹಾಸ್ಯಾಸ್ಪದವೆನಿಸುತ್ತದೆ. ತನ್ನ ಮನಸ್ಸಿಗೆ ಏನು ಬರುತ್ತದೆ ಅದನ್ನು ಮಾತನಾಡುವ ಪ್ರಧಾನಿಯೊಬ್ಬರನ್ನು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ನ್ಯೂಸ್ ನೇಶನ್ ಎಂಬ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮೋದಿಯವರು, ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿಯವರ ಕಲರ್ ಫೋಟೋವನ್ನು 1988ರಲ್ಲಿ ಡಿಜಿಟಲ್ ಕ್ಯಾಮರಾದಲ್ಲಿ ತೆಗೆದಿದ್ದೆ. ಆ ಸಮಯದಲ್ಲಿ ಇಮೇಲ್ ಬಳಸುತ್ತಿದ್ದೆ ಎಂದು ಕೂಡ ಪ್ರಧಾನಿ ಹೇಳಿದ್ದಾರೆ.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಭಾರತದಲ್ಲಿ ಮಾರುಕಟ್ಟೆಗೆ ಡಿಜಿಟಲ್ ಕ್ಯಾಮರಾ ಬಂದಿದ್ದು 1990ರ ನಂತರ ಮತ್ತು ಜನರು ಆ ಸಮಯದಲ್ಲಿ ಇಮೇಲ್ ಬಳಸುತ್ತಿರಲಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಹಲವರು ಈ ವಿಚಾರವನ್ನು ಟ್ರೋಲ್ ಮಾಡಿದ್ದರಿಂದ ಬಿಜೆಪಿಗೆ ತೀವ್ರ ಮುಜುಗರವಾಗಿತ್ತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಹ ಸಾಮಾನ್ಯ ವ್ಯಕ್ತಿಯೊಬ್ಬ 1988ರ ಹೊತ್ತಿನಲ್ಲಿ ಇಮೇಲ್ ಕಳುಹಿಸುವುದು ಅಸಾಧ್ಯವಾಗಿತ್ತು ಎಂದು ಖ್ಯಾ ಅರ್ಥಶಾಸ್ತ್ರಜ್ಞೆ ರೂಪಾ ಸುಬ್ರಹ್ಮಣ್ಯ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com