ಹಸಿದ ದಿವ್ಯಾಂಗ ಮಗುವಿಗೆ ಊಟ ತಿನ್ನಿಸುತ್ತಿರುವ ಭಾರತೀಯ ಯೋಧ, ವಿಡಿಯೋ ವೈರಲ್!

ದೇಶ ಕಾಯೋ ಯೋಧರೊಬ್ಬರು ಕರ್ತವ್ಯದ ವೇಳೆ ಹಸಿದುಕೊಂಡಿದ್ದ ದಿವ್ಯಾಂಗ ಮಗುವಿಗೆ ತನ್ನ ಲಂಚ್ ಬ್ಯಾಕ್ ನಲ್ಲಿದ್ದ ಊಟವನ್ನು ತಿನ್ನಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ದೇಶ ಕಾಯೋ ಯೋಧರೊಬ್ಬರು ಕರ್ತವ್ಯದ ವೇಳೆ ಹಸಿದುಕೊಂಡಿದ್ದ ದಿವ್ಯಾಂಗ ಮಗುವಿಗೆ ತನ್ನ ಲಂಚ್ ಬ್ಯಾಕ್ ನಲ್ಲಿದ್ದ ಊಟವನ್ನು ತಿನ್ನಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಿಯಂತ್ರಣದ ಹೊಣೆ ಹೊತ್ತ ಯೋಧರೊಬ್ಬರು ಊಟದ ವಿರಾಮದ ವೇಳೆ ಮಗುವೊಂದು ಕುಳಿತ್ತಿದ್ದನ್ನು ನೋಡಿದ್ದಾರೆ. ಕೂಡಲೇ ಮಗುವಿನ ಬಳಿಗೆ ಹೋಗಿ ತನ್ನ ಟಿಫನ್ ಕ್ಯಾರಿಯರ್ ಅನ್ನು ತೆಗೆದು ಊಟ ನೀಡಿದ್ದಾರೆ.
ಸಿಆರ್ಪಿಎಫ್ ಹವಾಲ್ದಾರ್ ಇಕ್ಬಾಲ್ ಸಿಂಗ್ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಬುತ್ತಿಯಲ್ಲಿನ ಊಟವನ್ನು ಇಕ್ಬಾಲ್ ಮಗುವಿಗೆ ತಿನ್ನಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com