ನೀರವ್ ಮೋದಿ, ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ: ವಿವರ ಹಂಚಿಕೊಳ್ಳಲು ವಿದೇಶಾಂಗ ಸಚಿವಾಲಯ ನಕಾರ

ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಸಂಬಂಧ ವಿವರಗಳನ್ನು ಹಂಚಿಕೊಳ್ಳಲು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ.
ವಿಜಯ್ ಮಲ್ಯ ಹಾಗೂ ನೀರವ್ ಮೋದಿ
ವಿಜಯ್ ಮಲ್ಯ ಹಾಗೂ ನೀರವ್ ಮೋದಿ
ನವದೆಹಲಿ: ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಸಂಬಂಧ ವಿವರಗಳನ್ನು ಹಂಚಿಕೊಳ್ಳಲು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿರುವ ವೇಳೆ ಅವರ ಸಂಬಂಧ ವಿವರ ಬಹಿರಂಗ ಪಡಿಸುವುದು ಅಪಾಯಕಾರಿಯಾಗಲಿದೆ ಎಂಬ ಆರ್ಟಿಐ ಕಾಯ್ದೆಯಲ್ಲಿನನಿಯಮವನ್ನು ಉಲ್ಲೇಖಿಸಿ ಸಚಿವಾಲಯ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದೆ.
ಮಲ್ಯ ಹಾಗೂ ಮೋದಿ ಹಸ್ತಾಂತರ ಪ್ರಕ್ರಿಯೆ ಜಾರಿಯಲ್ಲಿದೆ, ಇದಕ್ಕಾಗಿ ಯುಕೆಗೆ ತಂಡವನ್ನು ಕಳಿಸಲಾಗಿದೆ ಎಂದು ಆರ್ಟಿಐ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ.
"ಮಲ್ಯ ಹಾಗೂ ನೀರವ್ ಮೋದಿ ಹಸ್ತಾಂತರಕ್ಕೆ ಸಂಬಂಧಪಟ್ಟ ಯುಕೆ ಅಧಿಕಾರಿಗಳ ಕಾರ್ಯವೈಖರಿ, ಬೆಳವಣಿಗೆ ಕುರಿತು ಮಾಹಿತಿ ಪಡೆಯುವುದು ಆರ್ಟಿಐ ಕಾಯ್ದೆ 8 (1) (ಎಚ್) ಅಡಿಯಲ್ಲಿ ನಿಷೇಧಿತವಾಗಿದೆ" ಎಂದು ಸಚಿವಾಲಯವು  ತಿಳಿಸಿದೆ. ಪಿಟಿಐ ಪತ್ರಕರ್ತರು.ಸಲ್ಲಿಸಿದ್ದ ಅರ್ಜಿಗೆ ಸಚಿವಾಲಯ ಈ ಉತರ ನೀಡಿದೆ.
ಮದ್ಯದ ದೊರೆ ವಿಜಯ್ ಮಲ್ಯಗೆ ಇಂಗ್ಲೆಂಡ್ ಕೋರ್ಟ್ ನಲ್ಲಿ ಜಾಮೀನು ಸಿಕ್ಕಿದೆ.  ಮಾಜಿ ಕಿಂಗ್ಫಿಶರ್ ಏರ್ಲೈನ್ಸ್ 'ಬಾಸ್ ಮಲ್ಯ ಭಾರತದಲ್ಲಿ  9 ಸಾವಿರ ಕೋಟಿ ರೂ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಯುಕೆ ಗೃಹ ಕಾರ್ಯದರ್ಶಿ ಮಲ್ಯ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಮಲ್ಯ ತಮ್ಮ ಹಸ್ತಾಂತರ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು ಈ ವಿಚಾರಣೆ ಜುಲೈ 2ಕ್ಕೆ ನಡೆಯಲಿದೆ.
ಇನ್ನು ಪಿಎನ್ಬಿ ವಂಚಕ ನೀರವ್ ಮೋದಿ ಸಹ ಲಂಡನ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದು ಯುಕೆ ಕೋರ್ಟ್ ಅವರಿಗೆ ಮೂರನೇ ಬಾರಿಗೆ ಜಾಮೀನು ನಿರಾಕರಿಸಿದೆ. ಈ ವರ್ಷ ಮಾರ್ಚ್ ನಲ್ಲಿ ಮೋದಿ ಬಂಧನವಾಗಿದ್ದು ಸದ್ಯ ಅವರೂ ಸಹ ಜೈಲಿನ ಕಂಬಿ ಹಿಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com