ಅಸ್ಸಾಂ ಪೊಲೀಸರ ಮಹತ್ವದ ಕಾರ್ಯಾಚರಣೆ, 3 ಉಲ್ಫಾ ಉಗ್ರರ ಬಂಧನ

ಅಸ್ಸಾಂ ಪೊಲೀಸರಿಗೆ ತಲೆನೋವಾಗಿರುವ ಉಲ್ಫಾ ಉಗ್ರಸಂಘಟನೆಯ ಮೂವರು ಉಗ್ರರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Published: 15th May 2019 12:00 PM  |   Last Updated: 15th May 2019 09:37 AM   |  A+A-


Three ULFA (I) rebels arrested by Assam Police

ಉಲ್ಫಾ ಉಗ್ರರ ಬಂಧನ

Posted By : SVN SVN
Source : ANI
ತಿನ್ ಸುಖಿಯಾ: ಅಸ್ಸಾಂ ಪೊಲೀಸರಿಗೆ ತಲೆನೋವಾಗಿರುವ ಉಲ್ಫಾ ಉಗ್ರಸಂಘಟನೆಯ ಮೂವರು ಉಗ್ರರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಸ್ಸಾಂ ತಿನ್ ಸುಖಿಯಾದಲ್ಲಿ ಉಲ್ಫಾ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಅಸ್ಸಾಂ ಪೊಲೀಸರು ಸೂಕ್ತ ಭದ್ರತೆಯೊಂದಿಗೆ ದಾಳಿ ನಡೆಸಿ ಮೂವರು ಶಸ್ತ್ರ ಸಜ್ಜಿತ ಉಗ್ರರನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಅಪಾರ ಪ್ರಮಾಣದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. 

ಮೂಲಗಳ ಪ್ರಕಾರ ಇಲ್ಲಿನ ತಾರಣಿ ಮೀಸಲು ಅರಣ್ಯ ಪ್ರದೇಶದಲ್ಲಿ ನಿನ್ನೆ ಉಗ್ರರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ಉಗ್ರರನ್ನು ಬಂಧಿಸಿದ್ದಾರೆ. ಪ್ರಸ್ತುತ ಬಂಧಿತ ಉಗ್ರರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಿನ್ನೆ ನಡೆದ ಉಲ್ಫಾ ಉಗ್ರರ ವಿರುದ್ಧದ ಕಾರ್ಯಾಚರಣೆ ಮಹತ್ವದ್ಧು ಎಂದು ಹೇಳಲಾಗುತ್ತಿದ್ದು, ಉಲ್ಫಾ ಸಂಘಟನೆಯ ಸ್ಥಳೀಯ ನಾಯಕತ್ವ ವಹಿಸಿಕೊಂಡಿದ್ದ ಪ್ರಮುಖ ಕಮಾಂಡರ್ ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಪೊಲೀಸರು ಮಾಹಿತಿ ನೀಡಬೇಕಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp