ಒಮಾನ್ ನಿಂದ ರಕ್ಷಿಸಿದ ಸುಷ್ಮಾ ಸ್ವರಾಜ್ ಗೆ ಹೈದ್ರಾಬಾದ್ ಮಹಿಳೆ ಧನ್ಯವಾದ

ಉದ್ಯೋಗ ನೆಪದಲ್ಲಿ ಒಮಾನ್ ಗೆ ಸಾಗಣೆ ಮಾಡಲಾಗಿದ್ದ ಹೈದ್ರಾಬಾದಿನ ಕುಲ್ಸಾಮ್ ಬಾನು ಎಂಬ ಮಹಿಳೆಯನ್ನು ಐದು ತಿಂಗಳ ಬಳಿಕ ರಕ್ಷಿಸಲಾಗಿದ್ದು, ನೆರವು ನೀಡಿದ್ದಕ್ಕಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ಹೈದ್ರಾಬಾದ್ : ಉದ್ಯೋಗ ನೆಪದಲ್ಲಿ ಒಮಾನ್ ಗೆ ಸಾಗಣೆ ಮಾಡಲಾಗಿದ್ದ ಹೈದ್ರಾಬಾದಿನ ಕುಲ್ಸಾಮ್ ಬಾನು ಎಂಬ ಮಹಿಳೆಯನ್ನು ಐದು ತಿಂಗಳ ಬಳಿಕ ರಕ್ಷಿಸಲಾಗಿದ್ದು, ನೆರವು ನೀಡಿದ್ದಕ್ಕಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ವಿಷಯದ ಬಗ್ಗೆ ತನ್ನ ಮಗಳು ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದ ನಂತರ  ಭಾರತೀಯ ರಾಯಬಾರಿ ಅಧಿಕಾರಿಗಳು ಐದು ಸಾವಿರ ರಿಯಾಲ್ ಮೊತ್ತದ ದಂಡವನ್ನು ಪಾವತಿಸಿ ಭಾರತಕ್ಕೆ ಕರೆತಂದಿದ್ದಾರೆ.ಒಮಾನ್ ನಲ್ಲಿನ ಭಾರತೀಯ ರಾಯಬಾರಿ ಹಾಗೂ ಸುಷ್ಮಾ ಸ್ವರಾಜ್ ಅವರ ನೆರವಿನಿಂದ ಮೇ 8 ರಂದು ಹೈದ್ರಾಬಾದ್ ತಲುಪಿದ್ದು, ಅವರಿಗೆ ಧನ್ಯವಾದ ಹೇಳುವುದಾಗಿ ಸುದ್ದಿಸಂಸ್ಥೆಯೊಂದಿಗೆ ಅವರು ಹೇಳಿದ್ದಾರೆ.

ಕೆಲಸಕ್ಕಾಗಿ ಹುಡುಕುತ್ತಿರಬೇಕಾದರೆ ಅಬ್ರಾರ್ ಎಂಬ ಮಧ್ಯವರ್ತಿಯೊಬ್ಬರು ಪರಿಚಯವಾಗಿ ಮಸ್ಕತ್ ನಲ್ಲಿ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ಇರುವ  ಪಾರ್ಲರ್ ನಲ್ಲಿ ಬ್ಯೂಟಿಷಿಯನ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ ಡಿಸೆಂಬರ್ 17, 2018ರಂದು ಆಕೆಯನ್ನು ಮಸ್ಕತ್ ಗೆ  ಕರೆದುಕೊಂಡು ಹೋಗಿದ್ದು, ಅಲ್ಲಿ ಮನೆ ಕೆಲಸಕ್ಕೆ ಸೇರಿಸಿದ್ದಾರೆ. ಆ ಕೆಲಸ ಮಾಡಲು ನಿರಾಕರಿಸಿದ್ದಾಗ ಮಧ್ಯ ವರ್ತಿ ತನ್ನ ಮೇಲೆ ಹಲ್ಲೆ ನಡೆಸಿ ಊಟ ನೀರು ಕೊಡದೆ ಕೊಠಡಿಯೊಂದರಲ್ಲಿ ಕೂಡಿಹಾಕಿದರು ಎಂದು ಆಕೆ ತಿಳಿಸಿದ್ದಾರೆ.

ನಂತರ ಭಾರತೀಯ ರಾಯಬಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದು, ನಾಲ್ಕು ತಿಂಗಳ ಕಾಲ ಅವರೇ ಇಟ್ಟುಕೊಂಡಿದ್ದರು. ಸ್ವಲ್ಪ ದಿನಗಳ ಬಳಿಕ ತಮ್ಮ ಮಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com