ಮಲಗಿದ್ದವರ ಮೇಲೆ ಗುಂಡುಹಾರಿಸಿ ತನ್ನ ಕುಟುಂಬ ಸದಸ್ಯರನ್ನೇ ಸಾವಿನ ಮನೆಗಟ್ಟಿದ ಪಾಪಿ!

ಯುವಕನೊಬ್ಬ ತನ್ನ ತಂದೆ, ತಾಯಿ, ಸೋದರ ಹಾಗೂ ಪತ್ನಿ ಸೇರಿ ತನ್ನದೇ ಕುಟುಂಬ ಸದಸ್ಯರನ್ನು ರಾತ್ರಿ ಮಲಗಿದ್ದಾಗಲೇ ಗುಂಡಿಕ್ಕಿ ಕೊಂದು ಹಾಕಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರಾಯಸೇನದಲ್ಲಿ ನಡೆದಿದೆ.

Published: 16th May 2019 12:00 PM  |   Last Updated: 16th May 2019 06:11 AM   |  A+A-


MP man killed 4 of them his family

ಮಲಗಿದ್ದವರ ಮೇಲೆ ಗುಂಡುಹಾರಿಸಿ ತನ್ನ ಕುಟುಂಬ ಸದಸ್ಯರನ್ನೇ ಸಾವಿನ ಮನೆಗಟ್ಟಿದ ಪಾಪಿ!

Posted By : RHN RHN
Source : Online Desk
ರಾಯಸೇನ(ಮಧ್ಯಪ್ರದೇಶ): ಯುವಕನೊಬ್ಬ ತನ್ನ ತಂದೆ, ತಾಯಿ, ಸೋದರ ಹಾಗೂ ಪತ್ನಿ ಸೇರಿ ತನ್ನದೇ ಕುಟುಂಬ ಸದಸ್ಯರನ್ನು ರಾತ್ರಿ ಮಲಗಿದ್ದಾಗಲೇ ಗುಂಡಿಕ್ಕಿ ಕೊಂದು ಹಾಕಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರಾಯಸೇನದಲ್ಲಿ ನಡೆದಿದೆ.

ಜಿತೇಂದ್ರ ಸಿಂಗ್ ಠಾಕೂರ್ ಎಂಬಾತ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ತನ್ನದೇ ಕುಟುಂಬ ಸದಸ್ಯರನ್ನು ರಿವಾಲ್ವರ್ ನಿಂದ ಶೂಟ್ ಮಾಡಿ ಕೊಂದು ಹಾಕಿದ ಪಾಪಿ. ಈತ ತನ್ನ ಹೆತ್ತವರು, ಸೋದರ ಹಾಗೂ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಜಿತೇಂದ್ರ ಸಿಂಗ್ ಹಾಗೂ ಆತನ ಪತ್ನಿ ನಡುವೆ ಮನಸ್ತಾಪವಿತ್ತು. ಆಗಾಗ ಜಗಳವಾಗುತ್ತಿತ್ತು. ನಿನ್ನೆ ಸಹ ಇದೇ ರೀತಿ ಜಗಳವಾದಾಗ ಆರೋಪಿಯ ಪೋಷಕರು ಇಬ್ಬರ ಜಗಳ ಬಿಡಿಸಲು ಯತ್ನಿಸಿದ್ದಾರೆ. ಆಗ ಜಿತೇಂದ್ರ ಸಿಂಗ್ ತಾನು ತಾಯಿ, ತಂದೆಗೆ ಮೊದಲು ಕೊಡಲಿಯಿಂದ ಹೊಡೆದಿದ್ದ. ಹಾಗೂ ರಾತ್ರಿ ಮಲಗಿದ್ದ ವೇಳೆ ಗನ್ ತೆಗೆದುಕೊಂಡು ಪತ್ನಿ ಸೇರಿದಂತೆ ನಾಲ್ವರನ್ನು ಕೊಂದು ಹಾಕಿದ್ದಾನೆ ಎಂಬುದಾಗಿ ಪೋಲೀಸರು ಹೇಳಿದ್ದಾರೆ.

ಇನ್ನು ಆರೋಪಿಯ ಏಳು ವರ್ಷದ ಮಗನಿಗೆ ಸಹ ಗುಂಡು ತಗುಲಿದ್ದು ಆತ ತೀವ್ರ ಸ್ವರೂಪದ ಗಾಯಗಳಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಆಗಮಿಸಿದಾಗ ಘಟನೆ ಬೆಳಕು ಕಂಡಿದೆ. ಮನೆಯಲ್ಲಿ ಒಟ್ಟು ನಾಲ್ವರ ಶವ ಗಳು ಸಿಕ್ಕಿದ್ದು  ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp