ಮುಂಬೈ: ಪ್ರಗ್ಯಾ ಸಿಂಗ್ ವಿರುದ್ಧ 'ಅವಹೇಳನಕಾರಿ' ಪೋಸ್ಟ್ ಷೇರ್ ಮಾಡಿದ ವೈದ್ಯನ ಬಂಧನ

ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧದ ಅವಹೇಳನಕಾರಿ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ...

Published: 16th May 2019 12:00 PM  |   Last Updated: 16th May 2019 05:55 AM   |  A+A-


Mumbai doctor arrested for sharing 'derogatory post' on BJP's Sadhvi Pragya

ಪ್ರಗ್ಯಾ ಸಿಂಗ್ ಠಾಕೂರ್

Posted By : LSB LSB
Source : ANI
ಮುಂಬೈ: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧದ ಅವಹೇಳನಕಾರಿ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಷೇರ್ ಮಾಡಿದ ಆರೋಪದ ಮೇಲೆ 38 ವರ್ಷದ ಹೋಮಿಯೋಪಥಿ ವೈದ್ಯರೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
 
ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಸುನಿಲ್ ಕುಮಾರ್ ನಿಶಾದ್ ಎಂಬ ವೈದ್ಯರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರವೀಂದ್ರ ತಿವಾರಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ವಿಖ್ರೋಲಿ ನಿವಾಸಿ ಸುನಿಲ್ ಕುಮಾರ್ ನಿಶಾದ್ ಅವರನ್ನು ಬಂಧಿಸಲಾಗಿದೆ.

ಕಳೆದ ಹಲವು ದಿನಗಳಿಂದ ನಿರಂತರವಾಗಿ ಫೇಸ್ ಬುಕ್ ನಲ್ಲಿ ನಿಶಾದ್ ಅವರು ಹಿಂದು ವಿರೋಧಿ ಮತ್ತು ಬ್ರಾಹ್ಮಣ ವಿರೋಧಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಹೋಮಿಯೋಪಥಿ ವೈದ್ಯರಾಗಿದ್ದ ಅವರು ಫೇಸ್ ಬುಕ್ ನಲ್ಲಿ 4996 ಸ್ನೇಹಿತರನ್ನು ಹೊಂದಿದ್ದು, ಪ್ರಜ್ಞಾ ಸಿಂಗ್ ಠಾಕೂರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp