ಮೋದಿ ಸುಳ್ಳುಗಾರ: ಆಕ್ಸ್ ಫರ್ಡ್ ನಿಘಂಟಿನಲ್ಲಿ 'ಮೋದಿಲೈ' ಪದ, ಮೋದಿಗೆ ಟಾಂಗ್ ಕೊಟ್ಟ ರಾಹುಲ್!

ಪ್ರಧಾನಿ ಮೋದಿ ಸುಳ್ಳುಗಾರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸುತ್ತಲೆ ಬಂದಿದ್ದಾರೆ. ಇದೀಗ ಆಕ್ಸ್ ಫರ್ಡ್ ನಿಘಂಟಿನಲ್ಲಿ ಮೋದಿ ಲೈ ಎಂಬ ಪದ ಅಧಿಕೃತಗೊಂಡಿದೆ...

Published: 16th May 2019 12:00 PM  |   Last Updated: 16th May 2019 11:53 AM   |  A+A-


Narendra Modi-Rahul Gandhi

ನರೇಂದ್ರ ಮೋದಿ-ರಾಹುಲ್ ಗಾಂಧಿ

Posted By : VS VS
Source : Online Desk
ನವದೆಹಲಿ: ಪ್ರಧಾನಿ ಮೋದಿ ಸುಳ್ಳುಗಾರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸುತ್ತಲೆ ಬಂದಿದ್ದಾರೆ. ಇದೀಗ ಆಕ್ಸ್ ಫರ್ಡ್ ನಿಘಂಟಿನಲ್ಲಿ ಮೋದಿ ಲೈ ಎಂಬ ಪದ ಅಧಿಕೃತಗೊಂಡಿದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿಗೆ ರಾಹುಲ್ ಟಾಂಗ್ ಕೊಟ್ಟಿದ್ದಾರೆ. 

ತಮ್ಮ ಟ್ವೀಟರ್ ಖಾತೆಯಲ್ಲಿ ಅಕ್ಸ್ ಫರ್ಡ್ ನಿಘಂಟಿನ ಮೋದಿ ಲೈ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ರಾಹುಲ್ ಇಂಗ್ಲಿಷ್ ನಲ್ಲಿ ಹೊಸ ಪದವೊಂದು ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ.

ಇನ್ನು ಸ್ಕ್ರೀನ್ ಶಾಟ್ ನಲ್ಲಿ ಮೋದಿ ಲೈ ಇಂಗ್ಲಿಷ್ ನಿಘಂಟಿನ ಅರ್ಥವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಮೋದಿ ಲೈ ಎನ್ನುವ ಪದವನ್ನು ಮೋದಿ ಲೈಯರ್ಸ್ ಎಂಬ ಅರ್ಥದಲ್ಲಿ ಹೇಗೆ ಬಳಸುವುದು ಎಂಬುದನ್ನು ಉದಾಹರಣೆ ಸಮೇತ ತೋರಿಸಿದ್ದಾರೆ. Modilier ಎನ್ನುವ ಪದಕ್ಕೆ ನಿರಂತರವಾಗಿ ಸತ್ಯವನ್ನು ಸುಳ್ಳಾಗಿಸುವವ ಎಂಬ ಅರ್ಥ ನೀಡಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp