ಬೊಫೋರ್ಸ್ ಪ್ರಕರಣ: ಅರ್ಜಿ ಹಿಂಪಡೆದರೂ ತನಿಖೆ ಮುಂದುವರಿಯಲಿದೆ ಎಂದ ಸಿಬಿಐ

64 ಕೋಟಿ ರೂ. ಮೌಲ್ಯದ ಬೋಪೋರ್ಸ್ ಹಗರಣದ "ಕಿಕ್ ಬ್ಯಾಕ್" ಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐಅ ಮುಂದುವರಿಸಲಿದೆ. ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಬೊಫೋರ್ಸ್
ಬೊಫೋರ್ಸ್
ನವದೆಹಲಿ: 64 ಕೋಟಿ ರೂ. ಮೌಲ್ಯದ ಬೋಪೋರ್ಸ್ ಹಗರಣದ "ಕಿಕ್ ಬ್ಯಾಕ್" ಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ಮುಂದುವರಿಸಲಿದೆ. ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಬೋಫೋರ್ಸ್ ಪ್ರಕರಣದಲ್ಲಿ ಸಿಬಿಐ ಮತ್ತಷ್ಟು ತನಿಖೆ ನಡೆಸಲು ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಕೋರಿದೆ ಎಂದು ಸಿಬಿಐ ವಕ್ತಾರ ನಿತಿನ್ ವಕಾಂಕರ್ ಹೇಳಿದ್ದಾರೆ.
ಮೇ 8, 2019 ರಂದು ನ್ಯಾಯಾಲಯವು ಸಿಬಿಐಗೆ ಪ್ರಕರಣ ತನಿಖೆಗೆ ಸಿಬಿಐಗೆ ಸ್ವತಂತ್ರ ಹಕ್ಕು ಮತ್ತು ಅಧಿಕಾರವಿರುವಾಗ ತಮ್ಮದೇ ತನಿಖೆ ನಡೆಸಲು ಅಂತಹ ಅರ್ಜಿಯನ್ನೇಕೆ ಸಲ್ಲಿಸಿದ್ದಾರೆ ಎಂದು ಪ್ರಶ್ನಿಸಿತ್ತು. ಇದೇ ವೇಳೆ ಕಾನೂನು ಕ್ರಮ ಕೈಗೊಂಡ ಬಳಿಕ ಸಿಬಿಐ ಸೆಕ್ಷನ್ 173 (8) ರ ಅಡಿಯಲ್ಲಿನ ತನಿಖೆ ನಡೆಸಲು ನ್ಯಾಯಾಲಯ ಅನುಮತಿ ನೀಡದೆ ಹಾಗಾಗಿ ಬೋಫೋರ್ಸ್ ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ಅವರು ಹೇಳಿದರು.
ರಾಜಕೀಯವಾಗಿ ಸಂವೇದನಾಶೀಲವಾಗಿರುವ ಬೋಫೋರ್ಸ್ ಹಗರಣದ ಹೆಚ್ಚುವರಿ ತನಿಖೆ ಮಾಡಲು ಅನುಮತಿ ಕೋರಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸಿಬಿಐ ಹಿಂಪಡೆದನಂತರ ತನಿಖಾ ಸಂಸ್ಥೆ ಈ ಪ್ರತಿಕ್ರಿಯೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com