ಛತ್ತೀಸ್ ಗಡ: ಕೈಯಲ್ಲಿ ಮಗುನೊಂದಿಗೆ ಪೊಲೀಸರಿಗೆ ಶರಣಾದ ನಕ್ಸಲ್ ಮಹಿಳೆ

ಛತ್ತೀಸ್ ಗಡದ ಕಾಂಕೆರೆ ಜಿಲ್ಲೆಯಲ್ಲಿ ಕಳೆದ ವಾರವಷ್ಟೇ ಜನ್ಮ ನೀಡಿದ ಮಗುವನ್ನು ಕೈಯಲ್ಲಿ ಇಟ್ಟುಕೊಂಡು ನಕ್ಸಲ್ ಮಹಿಳೆಯೊಬ್ಬರು ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ ಪುರ: ಛತ್ತೀಸ್ ಗಡದ ಕಾಂಕೆರೆ ಜಿಲ್ಲೆಯಲ್ಲಿ ಕಳೆದ ವಾರವಷ್ಟೇ ಜನ್ಮ ನೀಡಿದ ಮಗುವನ್ನು ಕೈಯಲ್ಲಿ ಇಟ್ಟುಕೊಂಡು ನಕ್ಸಲ್ ಮಹಿಳೆಯೊಬ್ಬರು ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯ ತಲೆಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ನಕ್ಸಲ್ ಮಹಿಳೆಯನ್ನು ಸುನಿತಾ ಆಲಿಯಾಸ್ ಕತ್ತಮ್  (30) ಎಂದು ಗುರುತಿಸಲಾಗಿದೆ. ಉತ್ತರ ಬಸ್ತಾರ್ ವಿಭಾಗದ  ನಕ್ಸಲ್ ಗುಂಪಿನ ಕ್ಯೂಮಾರಿ ಎಂಬ ಸ್ಥಳೀಯ ಘಟಕದ ಸದಸ್ಯೆಯಾಗಿದ್ದು, ಹೆರಿಗೆ ಹಿನ್ನೆಲೆಯಲ್ಲಿ ಆಕೆಯನ್ನು ಆತನ ಗಂಡ ಹಾಗೂ ಸಹೋದ್ಯೋಗಿಗಳು ಕಂಕೇರಿಯ ಕೊಯಾಲಿಬೆಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿದ್ದರು ಎಂದು ಎಸ್ಪಿ ಕೆಎಲ್ ಧ್ರುವ ತಿಳಿಸಿದ್ದಾರೆ.

ಈಕೆ ಕಳೆದ ವಾರ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ಆದರೆ, ಅದು ದುರ್ಬಲಗೊಂಡಿತ್ತು. ಮೇ 12 ರಂದು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರುವುದಾಗಿ ಹೇಳಿ, ಹಿರಿಯ ಪೊಲೀಸ್ ಅಧಿಕಾರಿಗಳು ಮುಂದೆ ಬುಧವಾರ ಶರಣಾಗಿದ್ದಾರೆ ಎಂದು ಅವರು ಹೇಳಿದರು.

ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೀಕ್ಷಣೆಗೆ ಇಡಲಾಗಿದೆ. 2014ರಲ್ಲಿ ಆಕೆ ಸಿಪಿಐ ಮಾವೋವಾದಿ ಸಂಘಟನೆ ಸೇರಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಆಕೆಗೆ ಪ್ರೋತ್ಸಾಹ ಧನವಾಗಿ 10 ಸಾವಿರ ರೂ. ಬಹುಮಾನ ನೀಡಲಾಗಿದೆ. ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ನೀತಿ ಆಧಾರದ ಮೇಲೆ ಸೌಕರ್ಯ ಒದಗಿಸಲಾಗುವುದು ಎಂದು ಕೆಎಲ್ ಧ್ರುವ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com