ಉತ್ತರಪ್ರದೇಶ: ಚಿಕಿತ್ಸೆ ಸಂದರ್ಭ ಬಾಯಲ್ಲಿ ಸ್ಫೋಟ, ಮಹಿಳೆ ಸಾವು

ವಿಚಿತ್ರ ಸನ್ನಿವೇಶವೊಂದರಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ರೋಗಿಯ ಬಾಯಿಯಿಂದ ಸ್ಪೊಟ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Published: 16th May 2019 12:00 PM  |   Last Updated: 16th May 2019 04:59 AM   |  A+A-


Woman in UP dies after explosion in her mouth during treatment

ಉತ್ತರಪ್ರದೇಶ: ಚಿಕಿತ್ಸೆ ಸಂದರ್ಭ ಬಾಯಲ್ಲಿ ಸ್ಫೋಟ, ಮಹಿಳೆ ಸಾವು

Posted By : RHN RHN
Source : The New Indian Express
ಅಲಿಗರ್(ಉತ್ತರ ಪ್ರದೇಶ): ವಿಚಿತ್ರ ಸನ್ನಿವೇಶವೊಂದರಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ರೋಗಿಯ ಬಾಯಿಯಿಂದ ಸ್ಪೊಟ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಹಿಳೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾರಣ ಆಕೆಯನ್ನು ಅಲಿಘರ್ ನ ಜೆ.ಎನ್. ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. 

ಆದರೆ ಶಸ್ತ್ರಚಿಕಿತ್ಸೆ ನಡೆಸುವ ವೇಳೆ ವೈದ್ಯರು ಮಹಿಳೆಯ ಬಾಯೊಗೆ ಆಮ್ಲಜನಕ ಹೀರುವ ಪೈಪ್ ಹಾಕಿದ್ದಾಗ ಬಾಯೊಳಗಿಂದ ಸ್ಪೋಟ ಸಂಭವಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಹಿಳೆ ಸೆಲ್ಫ್ಯೂರಿಕ್ ಆಮ್ಲದ ವಿಷವನ್ನು ಸೇವಿಸಿದ್ದಳು. ಚಿಕಿತ್ಸೆ ನೀಡುವ ವೇಳೆ ವೈದ್ಯರು ಆಕೆಗೆ ಆಮ್ಲಜನಕ ಪೂರೈಸಲು ಬಾಯಿಗೆ ಪೈಪ್ ಅಳವಡಿಸಿದ್ದಾರೆ. ಆಗ ಸೆಲ್ಫ್ಯೂರಿಕ್ ಆಮ್ಲ ಹಾಗೂ ಆಮ್ಲಜನಕ ಒಂದಕ್ಕೊಂದು ಸಂಪರ್ಕಕ್ಕೆ ಬಂದು ಸ್ಪೋಟ ಸಂಭವಿಸಿದೆ ಎಂದು ಐದ್ಯರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಘಟನೆ ಕುರಿತಂತೆ ಇನ್ನಷ್ಟು ತನಿಖೆ, ಸಂಶೋಧನೆ ನಡೆದ ಬಳಿಕವಷ್ಟೇ ಸ್ಪೋಟಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳೀದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp