ಬಿಹಾರ: ರಾಬ್ರಿ ದೇವಿ ನಿವಾಸದ ಭದ್ರತೆಗೆ ನಿಯೋಜಿತನಾಗಿದ್ದ ಬಾಗಲಕೋಟೆ ಯೋಧ ಆತ್ಮಹತ್ಯೆ

ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದ ಭದ್ರತೆಗ್ಗಾಗಿ ನಿಯೋಜಿತನಾಗಿದ್ದ ಕರ್ನಾಟಕ ಮೂಲದ ಕೇಂದ್ರ ರಿಸರ್ವ್ ಪೋಲಿಸ್ ಪಡೆ ಸೈನಿಕನೋರ್ವ ಸೇನಾ ರಿವಾಲ್ವರ್ ನಿಂದ ತನಗೆ...
ಗಿರಿಯಪ್ಪ ಕಿರಸೂರ್
ಗಿರಿಯಪ್ಪ ಕಿರಸೂರ್
ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದ ಭದ್ರತೆಗ್ಗಾಗಿ ನಿಯೋಜಿತನಾಗಿದ್ದ ಕರ್ನಾಟಕ ಮೂಲದ ಕೇಂದ್ರ ರಿಸರ್ವ್ ಪೋಲಿಸ್ ಪಡೆ ಸೈನಿಕನೋರ್ವ ಸೇನಾ ರಿವಾಲ್ವರ್ ನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಘಟನೆಯಲ್ಲಿ ಬಾಗಲಕೋಟೆ ಮೂಲದ ಸಿಆರ್ ಪಿಎಫ್ 122 ಬೆಟಾಲಿಯನ್ ಗೆ ಸೇರಿದ್ದ ಪೇದೆ ಗಿರಿಯಪ್ಪ ಕಿರಸೂರ್ (29) ಮೃತಪಟ್ಟಿದ್ದು ಶುಕ್ರವಾರ ರಾತ್ರಿ ರಾಷ್ಟ್ರೀಯ ಜನತಾ ದಳ ನಾಯಕಿಯ ಸರ್ಕ್ಯುಲರ್ ರೋಡ್ ಬಂಗಲೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಉಪ ಅಧೀಕ್ಷಕ ಎ. ಕೆ. ಪ್ರಭಾಕರ್ ತಿಳಿಸಿದ್ದಾರೆ.
ಇದೀಗ ಸೈನಿಕನ ಮೃತದೇಹವನ್ನು ಆತನ ಸ್ವಗ್ರಾಮವಾದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿರಿಗೆ ಕಳಿಸಲಾಗಿದೆ ಎಂದು ಡಿಎಸ್ಪಿ ಹೇಳಿದ್ದಾರೆ.
2012ರಲ್ಲಿ ಸಿಆರ್ ಪಿಎಫ್ ಕಾನ್ಸ್ಟೇಬಲ್ (ಪೇದೆ) ಆಗಿ ನೇಮಕವಾಗಿದ್ದ ಗಿರಿಯಪ್ಪ ಕಳೆದ ವರ್ಷ ಏಪ್ರಿಲ್ ನಲ್ಲಿ ವಿವಾಹವಾಗಿದ್ದರು.ಅಲ್ಲದೆ ಕಳೆದ ತಿಂಗಳಷ್ಟೇ ಗ್ರಾಮಕ್ಕೆ ಬಂದು ರಜೆ ದಿನಗಳನ್ನು ಕಳೆದಿದ್ದರು
ಇಸ್ರೇಲಿ ಮೂಲದ ಸಂಸ್ಥೆ ತಯಾರಿಸಿದ್ದ ರೈಫಲ್ ನಿಂದ ಯೋಧ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ರೈಫಲ್ ವಶಕ್ಕೆ ಪಡೆದಿರುವ ಪೋಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮೂಲಗಳ ಪ್ರಕಾರ ಆತ್ಮಹತ್ಯೆಗೆ ಮುನ್ನಾ ದಿನ ಗಿರಿಯಪ್ಪ ತನ್ನ ಪತ್ನಿಯೊಡನೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆ ವೇಳೆ ಆಕೆಯೊಡನೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಸ್ವಗ್ರಾಮ ಕಮತಗಿರಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com